Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವ ಒಪ್ಪಂದ ರದ್ದುಪಡಿಸಿ: ಸಿಪಿಐಎಂ ಆಗ್ರಹಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಪೋಸ್ಟ್: ಮಂಗಳೂರಿನಲ್ಲಿ FIR ದಾಖಲುಮೋದಿ ಸರ್ಕಾರದ ನೀತಿಗಳಿಂದ ಕಾರ್ಮಿಕ ವರ್ಗದ ಬದುಕು ವಿನಾಶದತ್ತ: ಸುಕುಮಾರ್ ತೊಕ್ಕೋಟುಹಿರಿಯ ಕಾಂಗ್ರೆಸ್ ನಾಯಕ ಸೂರಜ್ ಹೆಗ್ಡೆ ನಿಧನಪೂಜೆ ನೆರವೇರಿಸಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಆಸೀನರಾದ ಡಿ.ಕೆ. ಶಿವಕುಮಾರ್ಡಿಕೆ ಶಿವಕುಮಾರ್ ಮುಖ್ಯಮಂತ್ರಿ; ಜಿ. ಪರಮೇಶ್ವರ್ ಉಪಮುಖ್ಯಮಂತ್ರಿ 13 ಸಚಿವರೊಂದಿಗೆ ನೂತನ ಸಚಿವ ಸಂಪುಟ ಪ್ರಮಾಣ ವಚನ ಸ್ವೀಕಾರಸಂಶೋಧನಾ ಲೇಖನಗಳಿಗಾಗಿ ಕರೆ: ಸಹ್ಯಾದ್ರಿಯಲ್ಲಿ 3ನೇ IEEE ಅಂತರರಾಷ್ಟ್ರೀಯ ಸಮ್ಮೇಳನಪುಂಜಾಲಕಟ್ಟೆ: ಚಿಕ್ಕಪ್ಪನಿಗೆ ಬಿಯರ್ ಬಾಟಲಿಯಿಂದ ಇರಿದು ಹತ್ಯೆ • 🔥
Advertisement

ಧನು ಪೂಜೆಗೆ ಹೊರಟ ಹುಡುಗ… ಕೆರೆಯಲ್ಲಿ ಶವವಾಗಿ ಪತ್ತೆ: ಅಲ್ಲಿ ನಡೆದದ್ದೇನು?

ಧನು ಪೂಜೆಗೆ ಹೊರಟ ಹುಡುಗ… ಕೆರೆಯಲ್ಲಿ ಶವವಾಗಿ ಪತ್ತೆ: ಅಲ್ಲಿ ನಡೆದದ್ದೇನು?

ಬೆಳ್ತಂಗಡಿ: ತಾಲೂಕಿನ ಗೇರುಕಟ್ಟೆ ಪ್ರದೇಶದಲ್ಲಿ ಸಂಭವಿಸಿದ ಸುಮಂತ್ (15) ಎಂಬ ಬಾಲಕನ ನಾಪತ್ತೆ ಹಾಗೂ ನಂತರ ಕೆರೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ಇಡೀ ಪ್ರದೇಶದಲ್ಲಿ ಆತಂಕ ಮತ್ತು ಕುತೂಹಲಕ್ಕೆ ಕಾರಣವಾಗಿದೆ. ಆರಂಭದಲ್ಲಿ ಚಿರತೆ ದಾಳಿ, ನಂತರ ಕೊಲೆ ಎಂಬ ಅನುಮಾನಗಳು ವ್ಯಕ್ತವಾಗಿದ್ದರೂ, ಇದೀಗ ಶವಪರೀಕ್ಷೆಯ ಪ್ರಾಥಮಿಕ ವರದಿ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಮೃತ ಸುಮಂತ್‌ನ ತಂದೆ–ತಾಯಿ ನೀಡಿದ ಮಾಹಿತಿ ಪ್ರಕಾರ, ಧನು ಪೂಜೆಯ ದಿನ ಬೆಳಿಗ್ಗೆ ದೇವಸ್ಥಾನಕ್ಕೆ ಹೋಗುವುದಾಗಿ ಸುಮಂತ್ ತಿಳಿಸಿದ್ದ. ಸದಾ ಕೀಟಲೆ ಮಾಡುವ ಸ್ವಭಾವದವನಾಗಿದ್ದ ಅವನು, ಆ ರಾತ್ರಿ ತಾಯಿಯ ಜೊತೆ ಆಟವಾಡುತ್ತಾ ನಿದ್ದೆಗೆ ಜಾರಿದ್ದ. ಬೆಳಿಗ್ಗೆ ಬೇಗ ದೇವಸ್ಥಾನಕ್ಕೆ ಹೋಗಬೇಕೆಂಬ ಕಾರಣಕ್ಕೆ ತಾಯಿ ಅವನ ಬಟ್ಟೆಯನ್ನು ರಾತ್ರಿಯೇ ಸಿದ್ಧಪಡಿಸಿ ಮನೆಯ ಹೊರಭಾಗದಲ್ಲಿ ಇಟ್ಟುಕೊಂಡಿದ್ದರು. ಸಾಮಾನ್ಯವಾಗಿ ಸುಮಂತ್ ಬೆಳಿಗ್ಗೆ 4.30ರ ಹೊತ್ತಿಗೆ ಎದ್ದು ಸ್ನಾನ ಮುಗಿಸಿ ದೇವಸ್ಥಾನಕ್ಕೆ ಹೊರಡುತ್ತಿದ್ದ.

ಬೆಳಿಗ್ಗೆ 6ಕ್ಕೆ ಬಂದ ಕರೆ… ಆರಂಭವಾದ ಆತಂಕ

ಇದನ್ನೂ ಓದಿ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಪೋಸ್ಟ್: ಮಂಗಳೂರಿನಲ್ಲಿ FIR ದಾಖಲು

ಆದರೆ ಬೆಳಿಗ್ಗೆ 6.00 ಗಂಟೆಯ ವೇಳೆಗೆ ಸುಮಂತ್‌ನ ಗೆಳೆಯನೊಬ್ಬ ತಾಯಿಗೆ ಕರೆ ಮಾಡಿ,“ಸುಮಂತ್ ದೇವಸ್ಥಾನಕ್ಕೆ ಇನ್ನೂ ಬಂದಿಲ್ಲ” ಎಂದು ಹೇಳಿದ್ದಾನೆ. ಈ ಕರೆ ಬಂದ ತಕ್ಷಣ ಮನೆಯೊಳಗೆ ಆತಂಕ ಮನೆ ಮಾಡಿತು. ಸುಮಂತ್ ಮನೆಯಲ್ಲೂ ಇರಲಿಲ್ಲ. ತಂದೆ ತಕ್ಷಣವೇ ಗೇರುಕಟ್ಟೆ ಕಡೆಗೆ ಹುಡುಕಾಟಕ್ಕೆ ತೆರಳಿದರು. ಆದರೆ ಅಲ್ಲಿ ಕೂಡ ಸುಮಂತ್ ಪತ್ತೆಯಾಗಲಿಲ್ಲ. ಬಳಿಕ ಎದುರಾದ ಗೆಳೆಯರೂ “ಅವನು ಇಲ್ಲಿ ಬಂದಿಲ್ಲ” ಎಂದು ಹೇಳಿದಾಗ, ಸುಮಂತ್ ಎಲ್ಲಿ ಹೋದ? ಎಂಬ ಗಾಬರಿ ಎಲ್ಲರನ್ನೂ ಕಾಡತೊಡಗಿತು.

ಹುಡುಕಾಟದ ವೇಳೆ ಮೊದಲಿಗೆ ಗಮನಕ್ಕೆ ಬರದಿದ್ದರೂ, ವಾಪಸ್ಸು ಬರುವಾಗ ಸುಮಂತ್‌ನ ಸೈಕಲ್ ತೋಟದ ಹಾದಿಯಲ್ಲಿ ನಿಂತಿರುವುದು ಕಂಡುಬಂದಿತು. ಸುಮಂತ್ ಮನೆದಿಂದ ಸುಮಾರು 500 ಮೀಟರ್ ದೂರದಲ್ಲಿ, ತೋಟದ ಕಿರಿದಾದ ದಾರಿಯಲ್ಲಿ ಕಂಪೌಂಡ್‌ಗೆ ಒರಗಿಸಿ ಸೈಕಲ್ ಇಟ್ಟಿದ್ದ. ಆದರೆ ಇಲ್ಲಿ ಗಮನಾರ್ಹ ಅಂಶವೆಂದರೆ ” ಸೈಕಲ್ ಕೀ ಮನೆಯಲ್ಲೇ ಇತ್ತು”. ಇದರಿಂದ ಸುಮಂತ್ ಸೈಕಲ್ ತೆಗೆದುಕೊಂಡು ಹೋಗುವ ಮೊದಲೆ ದುರ್ಘಟನೆ ನಡೆದದ್ದು ಸ್ಪಷ್ಟವಾಗುತ್ತದೆ. ಸ್ಥಳೀಯರು ಹುಡುಕಾಟ ನಡೆಸಿದಾಗ, ಸೈಕಲ್ ನಿಂತಿದ್ದ ಸ್ಥಳದಿಂದ ಸುಮಾರು 100 ಮೀಟರ್ ಮೊದಲೆ ರಕ್ತದ ಕಲೆಗಳು ಕಂಡುಬಂದವು. ರಕ್ತದ ಹನಿಗಳು ನಿಧಾನವಾಗಿ ಕೆರೆಯ ದಿಕ್ಕಿಗೆ ಸಾಗುತ್ತಿರುವುದು ಗಮನಕ್ಕೆ ಬಂದಿದೆ.

ಕೆರೆಯಲ್ಲಿ ಶವ ಪತ್ತೆ

ಪೋಲೀಸರು ಸ್ಥಳಕ್ಕೆ ಆಗಮಿಸಿ ಕೆರೆಯನ್ನು ಪರಿಶೀಲಿಸಿದಾಗ, ಸುಮಂತ್‌ನ ಶವ ಕೆರೆಯಲ್ಲಿ ಪತ್ತೆಯಾಯಿತು. ಆರಂಭದಲ್ಲಿ ಚಿರತೆ ದಾಳಿ ಎಂಬ ವದಂತಿಗಳು ಹರಡಿದ್ದರೂ, ನಂತರದ ತನಿಖೆಯಲ್ಲಿ ಆ ಅನುಮಾನವನ್ನು ತಳ್ಳಿ ಹಾಕಲಾಯಿತು. ಪೋಲೀಸರು ಅಸಹಜ ಸಾವು ಪ್ರಕರಣವನ್ನು ಮತ್ತೆ ಕೊಲೆ ಎಂದು ಪರಿವರ್ತಿಸಿದರು, ಸುಮಂತ್‌ ನ ಶವ ಪರೀಕ್ಷೆಯ ನಂತರ ಲಭ್ಯವಾದ ಪ್ರಾಥಮಿಕ ಪೋಸ್ಟ್‌ಮಾರ್ಟಂ ವರದಿ ಪ್ರಕಾರ, ಬಾಲಕ ಕೆರೆಯಲ್ಲಿ ಮುಳುಗುವ ಸಮಯದಲ್ಲಿ ಜೀವಂತನಾಗಿದ್ದ ,ತಕ್ಷಣದ ಸಾವಿನ ಕಾರಣ: ಮುಳುಗು ಸಾವು (Drowning), ತಲೆಗೆ ಗಾಯವಾಗಿದ್ದರು ಯಾವುದೇ ಚೂಪಾದ ಅಥವಾ ತೀಕ್ಷ್ಣ ಆಯುಧದಿಂದ ಆದದಲ್ಲ, ತಲೆಗೆ ಉಂಟಾದ ಗಾಯವು ಮಧ್ಯಮ ಬಲದಿಂದ ಉಂಟಾದ ಉಮಟು (blunt force injury) ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ಪೂಜೆ ನೆರವೇರಿಸಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಆಸೀನರಾದ ಡಿ.ಕೆ. ಶಿವಕುಮಾರ್

ಆಗಿದ್ದೇನು?

ಈ ಎಲ್ಲ ಮಾಹಿತಿಗಳು ಪ್ರಕರಣವನ್ನು ಇನ್ನಷ್ಟು ನಿಗೂಢವಾಗಿಸಿದೆ. ಸುಮಂತ್‌ ಮನೆಯವರು ಸುತ್ತುಮುತ್ತಲ ಜನರ ನಡುವೆ ಉತ್ತಮ ಸಂಬಂಧವನ್ನೆ ಹೊಂದಿದ್ದರು, ಸರಕಾರಿ ಶಾಲೆಯಲ್ಲಿ ಓದುತ್ತಿದ್ದ ಸುಮಂತ್‌ ಕೂಡ ಪ್ರತಿಭಾವಂತ ವಿದ್ಯಾರ್ಥಿ, ನದಿಯಿಂದ ಪ್ಲಾಸ್ಟಿಕ್‌ ಹೊರೆತೆಗೆಯುವ ಪ್ರೋಜೆಕ್ಟ್‌ ಅನ್ನು ಅವಿಷ್ಕಾರ ಮಾಡಿದ್ದ ಅದನ್ನು ಮಂಡಿಸಲು ಗುಜರಾತ್ ಗೆ ತೆರಳುವ ಅವಕಾಶವನ್ನೂ ಪಡೆದುಕೊಂಡಿದ್ದ. ನಡುವೆ ಈ ಘಟನೆ ಹೆತ್ತವರಿಗೆ ಆಘಾತವನ್ನು ನೀಡಿದೆ. ಇದು ಬೆಳಗ್ಗಿನ ಹೊತ್ತು ನಡೆದ ಘಟನೆಯಾದರಿಂದ ಇದರ ಹಿಂದೆ ಸ್ಥಳಿಯ ಕಳ್ಳರು ಇರಬಹುದ? ಇದ್ದರು ಈ ಘಟನೆ ಸುಮಂತ್ ಮನೆಯಿಂದ ಸೈಕಲ್ ಕಡೆಗೆ ಹೋಗುವಾಗಲೇ ಈ ಘಟನೆ ನಡೆದಿತ್ತಾ? ಅಥವಾ ಸೈಕಲ್ ಕೀ ಮರೆತು ಮನೆಗೆ ಹಿಂದಿರುಗುವಾಗ ಏನಾದರೂ ಅನಾಹುತ ಸಂಭವಿಸಿತ್ತಾ? ಸೈಕಲ್‌ ಕೀ ಏಕೆ ಮನೆಯಲ್ಲೆ ಮೆರೆತ ? ತಲೆಗೆ ಗಾಯಗೊಂಡ ಬಳಿಕ ಆತ ಸ್ವತಃ ಕೆರೆಯತ್ತ ನಡೆದನಾ? ಅಥವಾ ಯಾರಾದರೂ ಅವನನ್ನು ಎತ್ತಿಕೊಂಡು ಅಥವಾ ಎಳೆದೊಯ್ದರಾ? ಇವೆಲವೂ ತನಿಖೆಯ ನಂತರವೇ ತಿಳಿಯ ಬೇಕಿದೆ. ಸದ್ಯ ಪೋಲೀಸ್‌ ತನಿಖೆ ತೀವೃಗೊಂಡಿದ್ದು ಈ ಪ್ರಕರಣದ ನಿಗೂಢತೆ ಇನ್ನೂ ಹಲವು ಪ್ರಶ್ನೆಗಳೊಂದಿಗೆ ಮುಂದುವರಿದಿದೆ.

😀
0
😍
0
😢
0
😡
0
👍
1
👎
0

Web Add
ದಕ್ಷಿಣ ಕನ್ನಡದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿದ್ದೆಯೇ ಬಿಎಸ್ಪಿ?
ದಕ್ಷಿಣ ಕನ್ನಡದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿದ್ದೆಯೇ ಬಿಎಸ್ಪಿ?
ತಾಣ- “ಮನಸ್ಸಿಗಿಂತ ನೆಮ್ಮದಿಯ ತಾಣ ಬೇರೊಂದಿಲ್ಲ.”
ತಾಣ- “ಮನಸ್ಸಿಗಿಂತ ನೆಮ್ಮದಿಯ ತಾಣ ಬೇರೊಂದಿಲ್ಲ.”
ಪ್ರಜಾಪರ ನ್ಯೂಸ್ ವರದಿಯ ಫಲಶೃತಿ ; ಸೇಸಮ್ಮರಿಗೆ ಪಾಸ್‌ವರ್ಡ್ ಹಸ್ತಾಂತರ, ಸಮಸ್ಯೆಗೆ ಅಂತ್ಯ
ಪ್ರಜಾಪರ ನ್ಯೂಸ್ ವರದಿಯ ಫಲಶೃತಿ ; ಸೇಸಮ್ಮರಿಗೆ ಪಾಸ್‌ವರ್ಡ್ ಹಸ್ತಾಂತರ, ಸಮಸ್ಯೆಗೆ ಅಂತ್ಯ
ಭಾಲ್ಕಿ | ನೀಟ್-ಯುಜಿ ಅಕ್ರಮ ಪ್ರಕರಣ ನಿಷ್ಪಕ್ಷಪಾತ ತನಿಖೆಗೆ ಎಬಿವಿಪಿ ಆಗ್ರಹ
ಭಾಲ್ಕಿ | ನೀಟ್-ಯುಜಿ ಅಕ್ರಮ ಪ್ರಕರಣ ನಿಷ್ಪಕ್ಷಪಾತ ತನಿಖೆಗೆ ಎಬಿವಿಪಿ ಆಗ್ರಹ
ಆರ್. ಧರ್ಮಸೇನಾ ಅವರಿಗೆ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ನಾಯಕರ ಒತ್ತಾಯ
ಆರ್. ಧರ್ಮಸೇನಾ ಅವರಿಗೆ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ನಾಯಕರ ಒತ್ತಾಯ
ನಾಳೆ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ.
ನಾಳೆ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ.
ಡಿಕೆ ಶಿವಕುಮಾರ್ ಮುಖ್ಯಮಂತ್ರಿ; ಜಿ. ಪರಮೇಶ್ವರ್ ಉಪಮುಖ್ಯಮಂತ್ರಿ 13 ಸಚಿವರೊಂದಿಗೆ ನೂತನ ಸಚಿವ ಸಂಪುಟ ಪ್ರಮಾಣ ವಚನ ಸ್ವೀಕಾರ
ಡಿಕೆ ಶಿವಕುಮಾರ್ ಮುಖ್ಯಮಂತ್ರಿ; ಜಿ. ಪರಮೇಶ್ವರ್ ಉಪಮುಖ್ಯಮಂತ್ರಿ 13 ಸಚಿವರೊಂದಿಗೆ ನೂತನ ಸಚಿವ ಸಂಪುಟ ಪ್ರಮಾಣ ವಚನ ಸ್ವೀಕಾರ
ಪೂಜೆ ನೆರವೇರಿಸಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಆಸೀನರಾದ ಡಿ.ಕೆ. ಶಿವಕುಮಾರ್
ಪೂಜೆ ನೆರವೇರಿಸಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಆಸೀನರಾದ ಡಿ.ಕೆ. ಶಿವಕುಮಾರ್
NEET: ದಕ್ಷಿಣ ಭಾರತದ ವಿದ್ಯಾರ್ಥಿಗಳಿಗೆ ಅನ್ಯಾಯ
NEET: ದಕ್ಷಿಣ ಭಾರತದ ವಿದ್ಯಾರ್ಥಿಗಳಿಗೆ ಅನ್ಯಾಯ
‘ಕಾಕ್ರೋಚ್ ಜನತಾ ಪಾರ್ಟಿ’ ಹಿಂದೆ ಇರುವ ಅಜೆಂಡಾ ಏನು? – ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹೊಸ ರಾಜಕೀಯ ವ್ಯಂಗ್ಯ ಚಳವಳಿ
‘ಕಾಕ್ರೋಚ್ ಜನತಾ ಪಾರ್ಟಿ’ ಹಿಂದೆ ಇರುವ ಅಜೆಂಡಾ ಏನು? – ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹೊಸ ರಾಜಕೀಯ ವ್ಯಂಗ್ಯ ಚಳವಳಿ
ಯು.ಟಿ. ಖಾದರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್‌ಗೆ ಆಗ್ರಹ
ಯು.ಟಿ. ಖಾದರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್‌ಗೆ ಆಗ್ರಹ
ಸಂಶೋಧನಾ ಲೇಖನಗಳಿಗಾಗಿ ಕರೆ: ಸಹ್ಯಾದ್ರಿಯಲ್ಲಿ 3ನೇ IEEE ಅಂತರರಾಷ್ಟ್ರೀಯ ಸಮ್ಮೇಳನ
ಸಂಶೋಧನಾ ಲೇಖನಗಳಿಗಾಗಿ ಕರೆ: ಸಹ್ಯಾದ್ರಿಯಲ್ಲಿ 3ನೇ IEEE ಅಂತರರಾಷ್ಟ್ರೀಯ ಸಮ್ಮೇಳನ
ಮೋದಿ ಸರ್ಕಾರದ ನೀತಿಗಳಿಂದ ಕಾರ್ಮಿಕ ವರ್ಗದ ಬದುಕು ವಿನಾಶದತ್ತ: ಸುಕುಮಾರ್ ತೊಕ್ಕೋಟು
ಮೋದಿ ಸರ್ಕಾರದ ನೀತಿಗಳಿಂದ ಕಾರ್ಮಿಕ ವರ್ಗದ ಬದುಕು ವಿನಾಶದತ್ತ: ಸುಕುಮಾರ್ ತೊಕ್ಕೋಟು
ಮನುಷ್ಯನ ಮನಸ್ಸನ್ನು ಓದುವ ಯಂತ್ರ ಸಾಧ್ಯವೇ? BCI ತಂತ್ರಜ್ಞಾನದ 100 ವರ್ಷದ ರೋಚಕ ಪಯಣ
ಮನುಷ್ಯನ ಮನಸ್ಸನ್ನು ಓದುವ ಯಂತ್ರ ಸಾಧ್ಯವೇ? BCI ತಂತ್ರಜ್ಞಾನದ 100 ವರ್ಷದ ರೋಚಕ ಪಯಣ
ಬೀದಿಬದಿ ವ್ಯಾಪಾರಿಗಳ ವಿರುದ್ಧ ನೈತಿಕ ಪೊಲೀಸ್‌ಗಿರಿ: ಕ್ರಮಕ್ಕೆ ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ ಒತ್ತಾಯ
ಬೀದಿಬದಿ ವ್ಯಾಪಾರಿಗಳ ವಿರುದ್ಧ ನೈತಿಕ ಪೊಲೀಸ್‌ಗಿರಿ: ಕ್ರಮಕ್ಕೆ ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ ಒತ್ತಾಯ
ಅಧಿಕಾರಿಗಳ ನಿರ್ಲಕ್ಷ್ಯ: ದಳವಾಯಿಹಳ್ಳಿಯ ನೀರಿನ ಸಮಸ್ಯೆಗೆ ಸ್ಪಂದಿಸಿ ಮಾನವೀಯತೆ ಮೆರದ ಪ್ರೊ. ಹರಿರಾಮ್
ಅಧಿಕಾರಿಗಳ ನಿರ್ಲಕ್ಷ್ಯ: ದಳವಾಯಿಹಳ್ಳಿಯ ನೀರಿನ ಸಮಸ್ಯೆಗೆ ಸ್ಪಂದಿಸಿ ಮಾನವೀಯತೆ ಮೆರದ ಪ್ರೊ. ಹರಿರಾಮ್
ಮಂಗಳೂರಿನಲ್ಲಿ ಭವ್ಯವಾಗಿ ಆರಂಭವಾದ ‘ಅಲ್ ನಜಿಮ್ ಅಸ್ ಸಾಕಿಬ್ ಪರ್ಫ್ಯೂಮ್ ಟ್ರೇಡರ್ಸ್’ – ಪರಿಮಳ ಪ್ರಿಯರ ಹೊಸ ಆಕರ್ಷಣೆಯ ಕೇಂದ್ರ
ಮಂಗಳೂರಿನಲ್ಲಿ ಭವ್ಯವಾಗಿ ಆರಂಭವಾದ ‘ಅಲ್ ನಜಿಮ್ ಅಸ್ ಸಾಕಿಬ್ ಪರ್ಫ್ಯೂಮ್ ಟ್ರೇಡರ್ಸ್’ – ಪರಿಮಳ ಪ್ರಿಯರ ಹೊಸ ಆಕರ್ಷಣೆಯ ಕೇಂದ್ರ
ಎಚ್ಚರ..! ಮೊಬೈಲ್‌ನಲ್ಲಿ ಈ APK ಆ್ಯಪ್ ಇನ್‌ಸ್ಟಾಲ್ ಮಾಡಿದ್ರೆ OTP ಕಳ್ಳತನ, ಬ್ಯಾಂಕ್ ಖಾತೆ ಖಾಲಿ
ಎಚ್ಚರ..! ಮೊಬೈಲ್‌ನಲ್ಲಿ ಈ APK ಆ್ಯಪ್ ಇನ್‌ಸ್ಟಾಲ್ ಮಾಡಿದ್ರೆ OTP ಕಳ್ಳತನ, ಬ್ಯಾಂಕ್ ಖಾತೆ ಖಾಲಿ
ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವ ಒಪ್ಪಂದ ರದ್ದುಪಡಿಸಿ: ಸಿಪಿಐಎಂ ಆಗ್ರಹ
ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವ ಒಪ್ಪಂದ ರದ್ದುಪಡಿಸಿ: ಸಿಪಿಐಎಂ ಆಗ್ರಹ
ಪೂಜ್ಯ ಧಮ್ಮತಿಸ್ಸ ಭಂತೇಜಿಯವರ ಸಾನ್ನಿಧ್ಯದಲ್ಲಿ ಮಂಗಳೂರಿನಲ್ಲಿ ಧಮ್ಮದೀಪ ಕಾರ್ಯಕ್ರಮ
ಪೂಜ್ಯ ಧಮ್ಮತಿಸ್ಸ ಭಂತೇಜಿಯವರ ಸಾನ್ನಿಧ್ಯದಲ್ಲಿ ಮಂಗಳೂರಿನಲ್ಲಿ ಧಮ್ಮದೀಪ ಕಾರ್ಯಕ್ರಮ
ಹಿರಿಯ ಕಾಂಗ್ರೆಸ್ ನಾಯಕ ಸೂರಜ್ ಹೆಗ್ಡೆ ನಿಧನ
ಹಿರಿಯ ಕಾಂಗ್ರೆಸ್ ನಾಯಕ ಸೂರಜ್ ಹೆಗ್ಡೆ ನಿಧನ
ದುಬಾರೆಯಲ್ಲಿ ಆನೆ ಕಾದಾಟದ ದುರಂತ: ಮಹಿಳೆ ಸಾವು – ವನ್ಯಜೀವಿಗಳಿಂದ ಸುರಕ್ಷಿತ ಅಂತರ ಕಾಪಾಡಲು ಸಚಿವ ಈಶ್ವರ ಖಂಡ್ರೆ ಸೂಚನೆ
ದುಬಾರೆಯಲ್ಲಿ ಆನೆ ಕಾದಾಟದ ದುರಂತ: ಮಹಿಳೆ ಸಾವು – ವನ್ಯಜೀವಿಗಳಿಂದ ಸುರಕ್ಷಿತ ಅಂತರ ಕಾಪಾಡಲು ಸಚಿವ ಈಶ್ವರ ಖಂಡ್ರೆ ಸೂಚನೆ
ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿಸಿ ಸಿಪಿಐಎಂ ಬೃಹತ್ ಪ್ರತಿಭಟನೆ
ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿಸಿ ಸಿಪಿಐಎಂ ಬೃಹತ್ ಪ್ರತಿಭಟನೆ
ಕರ್ನಾಟಕಕ್ಕೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ: ಜೂನ್‌ 3 ಸಂಜೆ ಪ್ರಮಾಣವಚನ
ಕರ್ನಾಟಕಕ್ಕೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ: ಜೂನ್‌ 3 ಸಂಜೆ ಪ್ರಮಾಣವಚನ
FACT CHECK ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಕ್ರಮಿ ಮತಾಂಧರು ಊರು ತೊರೆಯುತ್ತಿದ್ದಾರೆ ವಿಡಿಯೋದ ಅಸಲಿಯತ್ತು ಏನು?
FACT CHECK ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಕ್ರಮಿ ಮತಾಂಧರು ಊರು ತೊರೆಯುತ್ತಿದ್ದಾರೆ ವಿಡಿಯೋದ ಅಸಲಿಯತ್ತು ಏನು?
ಮಂಗಳೂರಿಗೆ ಹೊಸ ಪರಿಮಳ ಲೋಕ – ಭವ್ಯ ಉದ್ಘಾಟನೆಗೆ ಸಜ್ಜಾದ ‘ಅಲ್ ನಜಿಮ್ ಅಸ್ ಸಾಕಿಬ್ ಪರ್ಫ್ಯೂಮ್ ಟ್ರೇಡರ್ಸ್’
ಮಂಗಳೂರಿಗೆ ಹೊಸ ಪರಿಮಳ ಲೋಕ – ಭವ್ಯ ಉದ್ಘಾಟನೆಗೆ ಸಜ್ಜಾದ ‘ಅಲ್ ನಜಿಮ್ ಅಸ್ ಸಾಕಿಬ್ ಪರ್ಫ್ಯೂಮ್ ಟ್ರೇಡರ್ಸ್’
ಪುಂಜಾಲಕಟ್ಟೆ: ಚಿಕ್ಕಪ್ಪನಿಗೆ ಬಿಯರ್ ಬಾಟಲಿಯಿಂದ ಇರಿದು ಹತ್ಯೆ
ಪುಂಜಾಲಕಟ್ಟೆ: ಚಿಕ್ಕಪ್ಪನಿಗೆ ಬಿಯರ್ ಬಾಟಲಿಯಿಂದ ಇರಿದು ಹತ್ಯೆ
ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಪೋಸ್ಟ್: ಮಂಗಳೂರಿನಲ್ಲಿ FIR ದಾಖಲು
ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಪೋಸ್ಟ್: ಮಂಗಳೂರಿನಲ್ಲಿ FIR ದಾಖಲು
ಯುನೈಟೆಡ್ ಲೊರೆಟ್ಟೊ ಫ್ರೆಂಡ್ಸ್‌ಗೆ ಹೊಸ ಸಾರಥಿ: ಡೊನಾಲ್ಡ್ ನೊರೊನ್ಹಾ ಅಧ್ಯಕ್ಷ
ಯುನೈಟೆಡ್ ಲೊರೆಟ್ಟೊ ಫ್ರೆಂಡ್ಸ್‌ಗೆ ಹೊಸ ಸಾರಥಿ: ಡೊನಾಲ್ಡ್ ನೊರೊನ್ಹಾ ಅಧ್ಯಕ್ಷ
ದೇರಳಕಟ್ಟೆ ಆಸ್ಪತ್ರೆ ಜಂಕ್ಷನ್‌ನಲ್ಲಿ ಕೊಳಚೆ ನೀರಿನ ಸಮಸ್ಯೆ : ತಕ್ಷಣ ಕ್ರಮಕ್ಕೆ ಸಿಪಿಐ(ಎಂ) ಆಗ್ರಹ
ದೇರಳಕಟ್ಟೆ ಆಸ್ಪತ್ರೆ ಜಂಕ್ಷನ್‌ನಲ್ಲಿ ಕೊಳಚೆ ನೀರಿನ ಸಮಸ್ಯೆ : ತಕ್ಷಣ ಕ್ರಮಕ್ಕೆ ಸಿಪಿಐ(ಎಂ) ಆಗ್ರಹ
Prajapara News Kannada