Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ಕಲ್ಲೂರು: ಅಂಬಿಗರ ಚೌಡಯ್ಯ 906ನೇ ಜಯಂತಿ ಭಕ್ತಿಭಾವದಿಂದ ಆಚರಣೆ

ಕಲ್ಲೂರು: ಅಂಬಿಗರ ಚೌಡಯ್ಯ 906ನೇ ಜಯಂತಿ ಭಕ್ತಿಭಾವದಿಂದ ಆಚರಣೆ

ಗುಬ್ಬಿ: ತಾಲ್ಲೂಕಿನ ಕಡಬ ಹೋಬಳಿಯ ಕಲ್ಲೂರು ಗ್ರಾಮದಲ್ಲಿ ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಲ್ಲೂರು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಗಂಗಾಮತ (ಬೆಸ್ತರ) ಜನಾಂಗದವರಿಂದ ನಿಜಶರಣ ಅಂಬಿಗರ ಚೌಡಯ್ಯನವರ 906ನೇ ಜಯಂತಿ ಉತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಸೋಮಶೇಖರ್ ಅವರು, 12ನೇ ಶತಮಾನದಲ್ಲಿ ಬಸವಣ್ಣನವರ ಅನುಯಾಯಿಯಾಗಿದ್ದ ಅಂಬಿಗರ ಚೌಡಯ್ಯನವರು ಅನುಭವ ಮಂಟಪದ ಸಮಕಾಲೀನರಾಗಿದ್ದರು. ಅವರು ಕೇವಲ ತೆಪ್ಪ ಆಯಿಸುವ ವೃತ್ತಿಗಷ್ಟೇ ಸೀಮಿತವಾಗದೆ ಸಮಾಜ ಸುಧಾರಣೆಗೆ ವಚನಗಳನ್ನು ರಚಿಸಿದ ಮಹಾನ್ ವಚನಕಾರರು. ಅವರ ವಚನಗಳು ನೇರ, ನಿಷ್ಠುರವಾಗಿದ್ದು ಅಂದಿಗೂ ಇಂದಿಗೂ ಸಮಾಜಕ್ಕೆ ಪ್ರಸ್ತುತವಾಗಿವೆ. ಅಂಬಿಗರ ಚೌಡಯ್ಯ ಕೇವಲ ಗಂಗಾಮತ ಸಮುದಾಯಕ್ಕೆ ಸೀಮಿತರಲ್ಲ, ಇಡೀ ಸಮಾಜಕ್ಕೆ ಸೇರಿದ ಮಹಾನ್ ಚೇತನರು ಎಂದು ಹೇಳಿದರು.

ಇದನ್ನೂ ಓದಿ: ಉದ್ಯಾನವನದ ಜಾಗದ ಮೇಲೆ ಸರ್ಕಾರದ ಹೊಸ ಕಣ್ಣು? ಶೇ.5ರಷ್ಟು ಬಳಕೆಗೆ ಅನುಮತಿ

ಈ ಸಂದರ್ಭದಲ್ಲಿ ಅಗ್ನಿಶಾಮಕ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೇಮಂತ್ ಕುಮಾರ್ ಹಾಗೂ ಉದ್ಯಮಿ ಕಲ್ಕೆರೆ ಸೋಮಶೇಖರ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಶಾಂತ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಸುಶೀಲ ಸದಾಯ್ಯ. ಉಪಾಧ್ಯಕ್ಷೆ ಸುಮಿತ್ರ ನಿವೃತ್ತ ಮುಖ್ಯ ಶಿಕ್ಷಕ ರಾಮಯ್ಯ ಉಪಸ್ಥಿತರಿದ್ದರು

ಇದನ್ನೂ ಓದಿ: JCI ಬಂಟ್ವಾಳದಿಂದ ಶ್ರೀನಿವಾಸ್ ಅರ್ಬಿಗುಡ್ಡೆ ಅವರಿಗೆ ‘ಸಾಧನಶ್ರೀ’ ಪುರಸ್ಕಾರ

ತುರುವೇಕೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಕಲ್ಕೆರೆ ವಿ.ಎಸ್‌.ಎಸ್‌.ಎನ್ ಅಧ್ಯಕ್ಷ ರಾಜು, ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ್, ಗುತ್ತಿಗೆದಾರ ಸದಯ್ಯ, ತುಮಕೂರು ಜಿಲ್ಲೆಯ ಗಂಗಾಮತ ಸಮಾಜದ ನಿರ್ದೇಶಕ ಶಿವಕುಮಾರ್ ನಿಟ್ಟೂರು, ಕಲ್ಕೆರೆ ಸೋಮಣ್ಣ, ಶಶಿಕುಮಾರ್ ತೊಗರಿಘಟ್ಟ, ತಾಲ್ಲೂಕು ಕಾರ್ಯದರ್ಶಿ ಶ್ರೀನಿವಾಸ್, ಯುವ ಸಾಹಿತಿ ಅರುಣ್ ಕುಮಾರ್, ಖಜಾಂಚಿ ವೆಂಕಟೇಶ್, ಮುಖಂಡರಾದ ದಯಾನಂದ್, ಸುರೇಶ್, ಅಶೋಕ್ ಪಾಂಡು, ಶಿವಣ್ಣ, ಚೆನ್ನಮಲ್ಲಯ್ಯ ಸೇರಿದಂತೆ ಬೋಚಿಹಳ್ಳಿ ಹಾಗೂ ಕಲ್ಕೆರೆ ಗ್ರಾಮಸ್ಥರು ಮತ್ತು ಪಂಚಾಯಿತಿ ಸಿಬ್ಬಂದಿ ಭಾಗವಹಿಸಿದ್ದರು.

😀
0
😍
0
😢
0
😡
0
👍
2
👎
0

Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading