Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ನೂತನ ಗೋಪುರ ಭಕ್ತಿ–ಶ್ರದ್ಧೆಗೆ ಪ್ರೇರಣೆಯಾಗಲಿದೆ : ವಜ್ರನಾಭ ಶೆಟ್ಟಿ

ನೂತನ ಗೋಪುರ ಭಕ್ತಿ–ಶ್ರದ್ಧೆಗೆ ಪ್ರೇರಣೆಯಾಗಲಿದೆ : ವಜ್ರನಾಭ ಶೆಟ್ಟಿ

ಭಕ್ತರ ಭಾಗವಹಿಸುವಿಕೆಯಿಂದ ಕ್ಷೇತ್ರಾಭಿವೃದ್ಧಿಗೆ ಹೊಸ ಚೈತನ್ಯ : ತಾರಾನಾಥ ಕೊಟ್ಟಾರಿ

ಶ್ರೀ ಕ್ಷೇತ್ರ ಅರ್ಕುಳ ಉಳ್ಳಾಕ್ಲು ಮಗೃಂತಾಯಿ ದೈವಸ್ಥಾನದ ಪಶ್ಚಿಮ ಹಾಗೂ ದಕ್ಷಿಣ ಗೋಪುರಗಳ ನಿರ್ಮಾಣ ಕಾರ್ಯವು ಕ್ಷೇತ್ರದ ಇತಿಹಾಸದಲ್ಲಿ ಮಹತ್ವದ ಧಾರ್ಮಿಕ ಮತ್ತು ಸಾಂಸ್ಕೃತಿಕ ಘಟ್ಟವಾಗಿ ಗುರುತಿಸಲ್ಪಡುವುದಾಗಿ ಅರ್ಕುಳ ಬೀಡು ವಜ್ರನಾಭ ಶೆಟ್ಟಿಯವರು ತಿಳಿಸಿದ್ದಾರೆ. ದೇವರ ಅನುಗ್ರಹದಿಂದ ಆರಂಭಗೊಂಡಿರುವ ಈ ಪುಣ್ಯ ಕಾರ್ಯವು ಮುಂದಿನ ದಿನಗಳಲ್ಲಿ ಕ್ಷೇತ್ರದ ವೈಭವವನ್ನು ಮತ್ತಷ್ಟು ವೃದ್ಧಿಸುವುದರ ಜೊತೆಗೆ ಭಕ್ತರ ಭಕ್ತಿ ಹಾಗೂ ಶ್ರದ್ಧೆಗೆ ಹೊಸ ಪ್ರೇರಣೆಯಾಗಲಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಉದ್ಯಾನವನದ ಜಾಗದ ಮೇಲೆ ಸರ್ಕಾರದ ಹೊಸ ಕಣ್ಣು? ಶೇ.5ರಷ್ಟು ಬಳಕೆಗೆ ಅನುಮತಿ

ಶ್ರೀ ಕ್ಷೇತ್ರ ಅರ್ಕುಳದಲ್ಲಿ ಗೋಪುರ ನಿರ್ಮಾಣ ಕಾರ್ಯಕ್ಕೆ ಇತ್ತೀಚೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂಸ್ಕಾರ ಭಾರತಿಯ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ತಾರಾನಾಥ ಕೊಟ್ಟಾರಿಯವರು ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಕ್ತರ ಸಕ್ರಿಯ ಭಾಗವಹಿಸುವಿಕೆ ಹೊಸ ಚೈತನ್ಯವನ್ನು ಮೂಡಿಸುವುದರ ಜೊತೆಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗಳಿಗೆ ಪಸರಿಸಲು ಮಹತ್ವದ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಕ್ಷೇತ್ರದ ಭಕ್ತರು ಹಾಗೂ ಸಾರ್ವಜನಿಕರು ಈ ಪುಣ್ಯ ಕಾರ್ಯಕ್ಕೆ ಸಹಕಾರ ನೀಡುವಂತೆ ಕಂಪ ಸದಾನಂದ ಆಳ್ವ ಅವರು ವಿನಂತಿಸಿದರು.

ಇದನ್ನೂ ಓದಿ: ಕರ್ನಾಟಕದಲ್ಲಿ ಹಸಿರು ವಿದ್ಯುತ್ ಇಂಧನ ಮತ್ತು ಭೌಗೋಳಿಕ ರಾಜಕೀಯದ ಅಡ್ಡಿ

ಕಾರ್ಯಕ್ರಮದಲ್ಲಿ ಅರ್ಕುಳ ಬೀಡು ರತ್ನರಾಜ ಶೆಟ್ಟಿ, ಎ.ಬಿ. ಅಜಿತ್ ಕುಮಾರ್, ಟಿ. ಪುನೀತ್ ಸೇಮಿತ, ಉಳಿದೊಟ್ಟು ಮನೋಜ್, ಮಂಟಮೆ ದಿನಕರ ಕರ್ಕೇರಾ, ಕುಚ್ಚೂರು ಲೋಕಯ್ಯ ಪೂಜಾರಿ, ಪ್ರವೀಣ್ ಅಂಚನ್, ಟಿ. ರಘುನಾಥ ಪೂಜಾರಿ, ಅರ್ಕುಳ ಬೈಲ್ ಮೋನಪ್ಪ ಪೂಜಾರಿ, ಅರ್ಕುಳ ಬಸದಿ ಪುಷ್ಪರಾಜ ಇಂದ್ರ, ತುಪ್ಪೆಕಲ್ಲು ಮನೋಜ್ ಬಂಗೇರಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಡಾ.ಎ.ಜಯಕುಮಾರ ಶೆಟ್ಟಿ ಸ್ವಾಗತಿಸಿ ನಿರ್ವಹಿಸಿದ ಕಾರ್ಯಕ್ರಮದಲ್ಲಿ‌ ಕೊನೆಗೆ ತುಪ್ಪೆಕಲ್ಲು ನಾಗರಾಜ ಶೆಟ್ಟಿ ವಂದಿಸಿದರು.

😀
0
😍
0
😢
0
😡
0
👍
2
👎
0

Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading