Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ತಲೆನೋವು ಬಂದಾಗ ಹೀಗೆ ಮಾಡಿ: ಅಜೀರ್ಣ–ಉಷ್ಣದಿಂದಲೂ ತಲೆನೋವು ಬರಬಹುದು

ತಲೆನೋವು ಬಂದಾಗ ಹೀಗೆ ಮಾಡಿ: ಅಜೀರ್ಣ–ಉಷ್ಣದಿಂದಲೂ ತಲೆನೋವು ಬರಬಹುದು

ತಲೆನೋವು ಇಂದಿನ ವೇಗದ ಜೀವನದಲ್ಲಿ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದ್ದರೂ, ಇದರ ಹಿಂದೆ ಹಲವು ಕಾರಣಗಳು ಅಡಗಿವೆ. ಒತ್ತಡ, ನಿದ್ರೆ ಕೊರತೆ, ಸ್ಕ್ರೀನ್‌ ಸಮಯದ ಹೆಚ್ಚಳ, ದೇಹದ ನೀರಿನ ಕೊರತೆ ಮಾತ್ರವಲ್ಲ — ಅಜೀರ್ಣ ಅಥವಾ ದೇಹದ ಉಷ್ಣ ಹೆಚ್ಚಾದರೂ ತಲೆನೋವು ಉಂಟಾಗಬಹುದು. ತಜ್ಞರ ಪ್ರಕಾರ, ತಪ್ಪು ಆಹಾರ ಪದ್ಧತಿ, ಖಾರ–ಎಣ್ಣೆ ಹೆಚ್ಚು ಸೇವನೆ, ಹೊಟ್ಟೆ ಉರಿಯೂತ ಇವುಗಳು ದೇಹದ ಒಳಗಿನ ತಾಪಮಾನವನ್ನು ಹೆಚ್ಚಿಸಿ ತಲೆನೋವಿಗೆ ಕಾರಣವಾಗುತ್ತವೆ.

ಅಜೀರ್ಣ ಅಥವಾ ದೇಹದ ಉಷ್ಣ ಹೆಚ್ಚಾದಾಗ ತಲೆನೋವು ಬರುತ್ತದೆ

ಅಜೀರ್ಣದಿಂದ ಗ್ಯಾಸ್ಟ್ರಿಕ್ ಸಮಸ್ಯೆಗಳು ಉಂಟಾಗಿ ತಲೆ ಭಾಗಕ್ಕೆ ಒತ್ತಡ ಏರಬಹುದು. ಇದೇ ರೀತಿ, ದೇಹದ ಉಷ್ಣ ಏರಿದಾಗ ದೇಹ ನೀರನ್ನು ವೇಗವಾಗಿ ಕಳೆದುಕೊಳ್ಳುತ್ತಿದ್ದು, ಇದರಿಂದ ತಲೆನೋವು ತೀವ್ರವಾಗುತ್ತದೆ. ತಲೆನೋವು ಬಂದ ತಕ್ಷಣ ಹಲವರು ಮಾತ್ರೆ ಸೇವಿಸುತ್ತಾರೆ. ಆದರೆ ಅಜೀರ್ಣ ಅಥವಾ ಉಷ್ಣವೇ ಕಾರಣವಾಗಿದ್ದರೆ, ಮಾತ್ರೆ ತೆಗೆದುಕೊಂಡರೂ ದೇಹದ ಉಷ್ಣ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವೈದ್ಯರು ಸೂಚಿಸುತ್ತಾರೆ. ಇದರಿಂದ ನೋವು ಕ್ಷಣ ಮಾತ್ರ ಕಡಿಮೆಯಾಗಬಹುದು, ಆದರೆ ಮೂಲ ಸಮಸ್ಯೆ ಉಳಿಯುತ್ತದೆ.

ಇದನ್ನೂ ಓದಿ: JCI ಬಂಟ್ವಾಳದಿಂದ ಶ್ರೀನಿವಾಸ್ ಅರ್ಬಿಗುಡ್ಡೆ ಅವರಿಗೆ ‘ಸಾಧನಶ್ರೀ’ ಪುರಸ್ಕಾರ

ನೀರು ಕುಡಿಯುವುದು ಅತ್ಯಂತ ಮುಖ್ಯ

ದೇಹದ ಉಷ್ಣವನ್ನು ಸಮತೋಲನಗೊಳಿಸಲು ಮತ್ತು ಡಿಹೈಡ್ರೇಷನ್ ತಪ್ಪಿಸಲು ಸಾಕಷ್ಟು ನೀರು ಕುಡಿಯಬೇಕು.
ಒಂದು–ಎರಡು ಗ್ಲಾಸ್ ನೀರು ತಕ್ಷಣದ ರಿಲೀಫ್ ಕೊಡಬಹುದು. ಮೊಬೈಲ್, ಲ್ಯಾಪ್‌ಟಾಪ್‌ ಬಳಕೆ ಜಾಸ್ತಿಯಾದರೆ ಕಣ್ಣುಗಳಿಗೆ ಒತ್ತಡ ಹೆಚ್ಚಾಗಿ ತಲೆನೋವು ತೀವ್ರವಾಗುತ್ತದೆ.
10–15 ನಿಮಿಷ ಕಣ್ಣು ಮುಚ್ಚಿ ಶಾಂತವಾಗಿ ಕುಳಿತುಕೊಳ್ಳುವುದು ಉತ್ತಮ. ಒತ್ತಡದಿಂದಾಗುವ ತಲೆನೋವಿಗೆ ತಣ್ಣೀರು ಸೆಕ್‌ ಬಳಕೆ ಮಾಡಬಹುದು. ಸ್ನಾಯು ಬಿಗುವಿನಿಂದಾಗಿದ್ದರೆ ಬಿಸಿ ನೀರಿನ ಸೆಕ್‌ ಸಹಾಯವಾಗುತ್ತದೆ.

ಅಜೀರ್ಣಕ್ಕೆ ಸರಳ ಪರಿಹಾರಗಳು

ಇದನ್ನೂ ಓದಿ: ಉದ್ಯಾನವನದ ಜಾಗದ ಮೇಲೆ ಸರ್ಕಾರದ ಹೊಸ ಕಣ್ಣು? ಶೇ.5ರಷ್ಟು ಬಳಕೆಗೆ ಅನುಮತಿ

➤ ಉಗುರುಬೆಚ್ಚಗಿನ ನೀರು ಕುಡಿಯಿರಿ
➤ ಜೀರಿಗೆ–ಬೆಲ್ಲ ನೀರು ಸೇವಿಸಬಹುದು
➤ ಭಾರವಾದ, ಎಣ್ಣೆ–ಖಾರ ಆಹಾರಗಳನ್ನು ತಾತ್ಕಾಲಿಕವಾಗಿ ತಪ್ಪಿಸಿರಿ
➤ ಮೊಸರು ಅಥವಾ ನಿಂಬೆಹಣ್ಣು ನೀರು ದೇಹದ ಉಷ್ಣ ತಗ್ಗಿಸಲು ಸಹಾಯ ಮಾಡುತ್ತದೆ
➤ ಶುಂಠಿಗೆ ಆಂಟಿ–ಇನ್‌ಫ್ಲಾಮೇಟರಿ ಗುಣವಿದ್ದು ತಲೆನೋವಿಗೆ ಸಹಕಾರಿ.
ಶುಂಠಿ ರಸ + ಜೇನು ಸೇರಿಸಿ ಸೇವಿಸಿದರೆ ವಾಂತಿ ಭಾವ, ಅಜೀರ್ಣ ಮತ್ತು ತಲೆನೋವಿಗೆ ತ್ವರಿತ ಪರಿಹಾರ.
➤ ಕುತ್ತಿಗೆಗೆ ಮತ್ತು ತಲೆ ಭಾಗಕ್ಕೆ ಹಿತಕರ ಮಸಾಜ್ ಮಾಡಿದರೆ ರಕ್ತ ಸಂಚಾರ ಸುಧಾರಿಸಿ ತಲೆನೋವು ಕಡಿಮೆಯಾಗುತ್ತದೆ.
➤ 6–8 ಗಂಟೆಗಳ ನಿದ್ರೆ ತಲೆನೋವಿನಿಂದ ದೂರ ಇರಲು ಮುಖ್ಯ. ನಿದ್ರೆ ಕೊರತೆ ದೇಹದ ಉಷ್ಣ ಹೆಚ್ಚಲು ಕಾರಣವಾಗಬಹುದು.

ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು?

ಕೆಳಗಿನ ಲಕ್ಷಣಗಳು ಇದ್ದರೆ ವೈದ್ಯರ ಸಲಹೆ ಅವಶ್ಯ:

ಇದನ್ನೂ ಓದಿ: ಕರ್ನಾಟಕದಲ್ಲಿ ಹಸಿರು ವಿದ್ಯುತ್ ಇಂಧನ ಮತ್ತು ಭೌಗೋಳಿಕ ರಾಜಕೀಯದ ಅಡ್ಡಿ

➤ ನೋವು ಮರುಕಳಿಸುತ್ತಿರುವುದು ಅಥವಾ ದಿನದಿಂದ ದಿನಕ್ಕೆ ಹೆಚ್ಚಾಗುವುದು
➤ ವಾಂತಿ, ತಲೆಸುತ್ತು, ಜ್ವರ
➤ ದೃಷ್ಟಿ ಮಸುಕಾಗುವುದು
➤ ಮಾತನಾಡಲು ತೊಂದರೆ

ತಲೆನೋವು ಹಲವು ಕಾರಣಗಳಿಂದ ಬರುವುದರಿಂದ, ತಕ್ಷಣ ಮಾತ್ರೆ ಸೇವಿಸುವ ಬದಲು ಕಾರಣವನ್ನು ಗುರುತಿಸಿ ಸರಿಯಾದ ಕ್ರಮ ಕೈಗೊಳ್ಳುವುದೇ ಉತ್ತಮ.
ಅಜೀರ್ಣ–ಉಷ್ಣದಿಂದ ತಲೆನೋವು ಬಂದರೆ ಸರಳ ಮನೆೋಪಚಾರಗಳಿಂದಲೇ ಪರಿಹಾರ ಸಿಗುತ್ತದೆ.

Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading