Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ಮೀಸಲಾತಿ ಕುರಿತು ಅವಹೇಳನಕಾರಿ ಹೇಳಿಕೆ; ಪಬ್ಲಿಕ್ ಟಿವಿ ಆಂಕರ್ ಅರುಣ್ ಬಡಿಗೇರ್ ವಿರುದ್ಧ ಕೇಸು ದಾಖಲು

ಮೈಸೂರು: ಮೀಸಲಾತಿ ವ್ಯವಸ್ಥೆ ಕುರಿತು ಅವಹೇಳನಕಾರಿ ಹಾಗೂ ದ್ವೇಷ ಪ್ರಚೋದಿಸುವ ರೀತಿಯಲ್ಲಿ ಮಾತನಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಯ ಆಂಕರ್ ಅರುಣ್ ಬಡಿಗೇರ್ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ. ಮೈಸೂರು ನಿವಾಸಿಗಳಾದ ಕೆ.ಟಿ. ರಮೇಶ್ ಮತ್ತು ಮನೋಜ್ ಕುಮಾರ್ ಅವರು ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

ದೂರುದಾರರ ಪ್ರಕಾರ, ಜುಲೈ 25ರಂದು ಪ್ರಸಾರವಾದ ಪಬ್ಲಿಕ್ ಟಿವಿಯ ‘ಬಿಗ್ ಬುಲೆಟಿನ್’ ಕಾರ್ಯಕ್ರಮದಲ್ಲಿ ಅರುಣ್ ಬಡಿಗೇರ್ ಅವರು ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಹಾಗೂ ಇತರ ಹಿಂದುಳಿದ ವರ್ಗಗಳಿಗೆ (OBC) ನೀಡಲಾಗಿರುವ ಮೀಸಲಾತಿ ವ್ಯವಸ್ಥೆಯನ್ನು ಟೀಕಿಸುವ ಸಂದರ್ಭದಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಪಬ್ಲಿಕ್ ಟಿವಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಆಗಿರುವ ಕಾರ್ಯಕ್ರಮದ ವಿಡಿಯೋದ 00:05:36 ರಿಂದ 00:06:23 ಅವಧಿಯಲ್ಲಿ ಅವರು ಮೀಸಲಾತಿ ಪಡೆದವರು ಕಡಿಮೆ ಅಂಕಗಳನ್ನು ಪಡೆದು ಶಿಕ್ಷಕರು, ವೈದ್ಯರು ಹಾಗೂ ಇಂಜಿನಿಯರ್‌ಗಳಾಗುವುದರಿಂದ ಗುಣಮಟ್ಟ ಕುಸಿಯುತ್ತದೆ ಎಂಬ ಅರ್ಥ ಬರುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹೇಳಿಕೆಗಳು ಮೀಸಲಾತಿ ವ್ಯವಸ್ಥೆ ಹಾಗೂ ಅದರ ಫಲಾನುಭವಿಗಳ ಬಗ್ಗೆ ಸಮಾಜದಲ್ಲಿ ತಪ್ಪು ಕಲ್ಪನೆ ಮತ್ತು ದ್ವೇಷವನ್ನು ಉಂಟುಮಾಡುವ ಸಾಧ್ಯತೆ ಇದೆ ಎಂದು ದೂರುದಾರರು ಆರೋಪಿಸಿದ್ದಾರೆ.

ಇದನ್ನೂ ಓದಿ: ನಕಲಿ ಔಷಧ ಜಾಲದ ಆರೋಪ: ಶಾರ್ಜಾದಿಂದ ಬಂದ ಪ್ರಶಾಂತ್ ಎಸ್‌ಐಟಿ ವಶಕ್ಕೆ

ದೂರುದಾರರು, ಮೀಸಲಾತಿ ವ್ಯವಸ್ಥೆಯು ಭಾರತದ ಸಂವಿಧಾನವು ಕಲ್ಪಿಸಿರುವ ಸಾಮಾಜಿಕ ನ್ಯಾಯದ ಒಂದು ಪ್ರಮುಖ ಸಾಧನವಾಗಿದ್ದು, ಅದರ ಬಗ್ಗೆ ಅವಹೇಳನಕಾರಿ ಹೇಳಿಕೆಗಳು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡುವ ಸಾಧ್ಯತೆಯಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ, ಅರುಣ್ ಬಡಿಗೇರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.

Web Add
ಆನೆಗೆ ಡಿಕ್ಕಿ ಹೊಡೆಯಲು ಯತ್ನಿಸಿದ ಟ್ರಕ್ ಚಾಲಕನಿಗೆ ₹5,000 ದಂಡ

‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ ನಿಧನ; 64ನೇ ವಯಸ್ಸಿನಲ್ಲಿ ಕೊನೆಯುಸಿರು

ಮತ್ತೆ ಮಾಂಜಾ ದಾರಕ್ಕೆ ಸಿಲುಕಿ ಮತ್ತೊಂದು ಸಾವು: ಬೆಳಗಾವಿಯಲ್ಲಿ 19 ವರ್ಷದ ITI ವಿದ್ಯಾರ್ಥಿ ದಾರುಣ ಅಂತ್ಯ

ಓಟ್‌ ಚೋರಿಗೆ ನೀವು ಕಾರಣರಾ ? ನಮ್ಮ ಮತ ನಿಜವಾಗಿಯೂ ಗೌಪ್ಯವೇ?

ಡಿಎಸ್ಎಸ್ ಮುಖಂಡ ದಾಸಪ್ಪ ಪಿ.ಬಿ. ಪಲ್ಲತ್ತಡ್ಕ ನಿಧನ

ಚಿತ್ರಮಂದಿರದೊಳಗೆ ತಲೆ ಮೇಲೆ ಬಿದ್ದ ಸೀಲಿಂಗ್
ಚಿತ್ರಮಂದಿರದೊಳಗೆ ತಲೆ ಮೇಲೆ ಬಿದ್ದ ಸೀಲಿಂಗ್
ಥೇರೀಗಾಥಾ: ಬೌದ್ಧ ಭಿಕ್ಷುಣಿಯರ ಅನುಭವದ ಗೀತೆಗಳು

ಸೌಜನ್ಯ ಪ್ರಕರಣದ ಮರುತನಿಖೆಗೆ SIT ರಚನೆ: ಆದೇಶದ ಕಾನೂನು ಚೌಕಟ್ಟು ಹಾಗೂ ಆಕ್ಷೇಪಗಳ ಪೂರ್ಣ ವಿಶ್ಲೇಷಣೆ

ಕಾನೂನಿನ ಮುಂದೆ ಮುಖ್ಯಮಂತ್ರಿ ಕೂಡ ಸಾಮಾನ್ಯ ನಾಗರಿಕರೇ: ಬಿಜೆಪಿ

ವಾಹನ ಸಂಚಾರದ ವಿಚಾರಕ್ಕೆ ಗಲಾಟೆ: 30 ವರ್ಷದ ವ್ಯಕ್ತಿ ಕೊಲೆ!

ಮಹಾರಾಷ್ಟ್ರದಲ್ಲಿ ದುರಂತ: ಪ್ರವಾಸಕ್ಕೆ ತೆರಳಿದ್ದ 8 ವಿದ್ಯಾರ್ಥಿಗಳು ಸಮುದ್ರದಲ್ಲಿ ಮುಳುಗಿ ಸಾವು

ಬೆನ್ನಿಗೆ ಹಾಕಿದ್ದ ಗಿಟಾರ್‌ಗೆ ₹500 ದಂಡ!?AI ಕ್ಯಾಮೆರಾ! ಎಡವಟ್ಟು

ಜಂತರ್‌ ಮಂತರ್‌ ಪ್ರತಿಭಟನೆ: ನೆಹಾ ಬೋರಾ ಸೇರಿ 500ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ

ನಕಲಿ ಔಷಧ ಜಾಲದ ಆರೋಪ: ಶಾರ್ಜಾದಿಂದ ಬಂದ ಪ್ರಶಾಂತ್ ಎಸ್‌ಐಟಿ ವಶಕ್ಕೆ

MRPL ಆವರಣದಲ್ಲಿ ಭಾರೀ ಸದ್ದು; ದಟ್ಟ ಹೊಗೆ, ಸ್ಥಳೀಯರಲ್ಲಿ ಆತಂಕ

ದೆಹಲಿ ಪೊಲೀಸ್‌ ಸಿಬ್ಬಂದಿಯಿಂದ ಜೆನ್ Z ಪ್ರತಿಭಟನಕಾರನ ಮುಖಕ್ಕೆ ಮುಷ್ಟಿ ಏಟು? ವಿಡಿಯೋ ವೈರಲ್

ಎಸ್‌ಐಆರ್‌ ಕುರಿತು ಚುನಾವಣಾ ಆಯೋಗದ ಸ್ಪಷ್ಟನೆ
ಎಸ್‌ಐಆರ್‌ ಕುರಿತು ಚುನಾವಣಾ ಆಯೋಗದ ಸ್ಪಷ್ಟನೆ
ಕಿರಿಯ ವಯಸ್ಸಿನಲ್ಲೇ ವಿಶ್ವ ದಾಖಲೆ ಬರೆದ ಮಾಸ್ಟರ್ ಸೋಹನ್; ಆದಿದ್ರಾವಿಡ ಸಮುದಾಯಕ್ಕೆ ಹೆಮ್ಮೆ

ಚುನಾವಣಾ ಆಯೋಗದ ಬಿಕ್ಕಟ್ಟು: ರಾಜೀನಾಮೆ ಪರಿಹಾರವೇ ಅಥವಾ ಸಾಂವಿಧಾನಿಕ ಪುನಾರಚನೆ ಅನಿವಾರ್ಯವೇ?

ಫಾರ್ಮ್-6, 6A, 7, 8ರಲ್ಲಿ ಸುಳ್ಳು ಅರ್ಜಿ ಸಲ್ಲಿಸಿದ್ರೆ ಕ್ರಮ: CEO ಅನ್ಬುಕುಮಾರ್ ಸೂಚನೆ

₹500 ನೋಟುಗಳನ್ನು ಬಳಸಿ ವಂಚನೆಗೆ ಯತ್ನ: ಇಬ್ಬರು ಮಹಿಳೆಯರು ಸೇರಿದಂತೆ ಮೂವರ ಬಂಧನ!

Fake ತೃತೀಯಲಿಂಗಿಗಳ ವೇಷದಲ್ಲಿ BMW ಮಾಲೀಕರಿಂದ ₹5,000 ಬೇಡಿಕೆ: ನಾಲ್ವರು ಬಂಧನ

ತಲೆಮಾರುಗಳ ತಲೆನೋವು – ಸೋಸಲೆಗಂಗಾಧರ್
ತಲೆಮಾರುಗಳ ತಲೆನೋವು – ಸೋಸಲೆಗಂಗಾಧರ್
Prajapara News Kannada

Discover more from Prajapara News

Subscribe now to keep reading and get access to the full archive.

Continue reading