ಬಂಟ್ವಾಳ: ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ (ರಿ.) ಬಂಟ್ವಾಳ ತಾಲೂಕು ಘಟಕದ ವಾರ್ಷಿಕ ಮಹಾಸಭೆ ಹಾಗೂ ತಾಲೂಕು ಸಮಿತಿ ಪುನರ್ ರಚನೆ ಸಭೆ ಆಗಸ್ಟ್ 9ರಂದು ಬಿ.ಸಿ.ರೋಡ್ನ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀನಿವಾಸ್ ಅರ್ಬಿಗುಡ್ಡೆ ಅವರ ಅಧ್ಯಕ್ಷತೆಯಲ್ಲಿ ಬೆಳಗ್ಗೆ 10.30ಕ್ಕೆ ಸಭೆ ಜರುಗಿತು. ಸಭೆಯಲ್ಲಿ ಸಂಘದ ವಿವಿಧ ಚಟುವಟಿಕೆಗಳು ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ಚರ್ಚೆ ನಡೆಸಿ, ಬಂಟ್ವಾಳ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳು
- ಗೌರವಾಧ್ಯಕ್ಷರು: ಸಂತೋಷ್ ಭಂಡಾರಿಬೆಟ್ಟು, ಬಂಟ್ವಾಳ
- ಅಧ್ಯಕ್ಷರು: ಮಾಧವ ವಿ.ಎಸ್., ಕಡೇಶಿವಾಲಯ
- ಉಪಾಧ್ಯಕ್ಷರು: ಮಂಜುನಾಥ ಮಾಡ, ಶೇಖರ ಬಿಯಾಪಾದೆ
- ಪ್ರಧಾನ ಕಾರ್ಯದರ್ಶಿ: ಪ್ರೀತಿರಾಜ್ ದ್ರಾವಿಡ್, ಪಲ್ಲಮಜಲು
- ಜೊತೆ ಕಾರ್ಯದರ್ಶಿ: ಯೋಗೀಶ್ ಚೆಂಡ್ತಿಮಾರ್
- ಕೋಶಾಧಿಕಾರಿ: ಲೋಕಯ್ಯ ಗಾಡಿಪಲ್ಕೆ
- ಕ್ರೀಡಾ ಕಾರ್ಯದರ್ಶಿ: ಮೋಹನ್ ಬಾಳಿಕೆ
- ಜೊತೆ ಕ್ರೀಡಾ ಕಾರ್ಯದರ್ಶಿ: ಆನಂದ ಕೆದ್ದಳಿಕೆ
- ಸಂಘಟನಾ ಕಾರ್ಯದರ್ಶಿ: ಸುರೇಶ್ ಕಜೆಕಾರು
- ಸಾಂಸ್ಕೃತಿಕ ಕಾರ್ಯದರ್ಶಿಗಳು: ಜಯಂತಿ ವಾಮದಪದವು, ಸೀಮಾ ಬಡಗಬೆಳ್ಳೂರು
ಗೌರವ ಸಲಹೆಗಾರರು
ಧರ್ಣಪ್ಪ ಬಡಗಬೆಳ್ಳೂರು, ಸುರೇಶ್ ಸಜಿಪ, ನಾರಾಯಣ ಬೊಂಡಾಲ ಹಾಗೂ ಚಂದಪ್ಪ ಚೆಂಡ್ತಿಮಾರ್ ಅವರನ್ನು ಗೌರವ ಸಲಹೆಗಾರರಾಗಿ ಆಯ್ಕೆ ಮಾಡಲಾಗಿದೆ.
ನೂತನ ಸಮಿತಿಯು ಸಂಘದ ಆಶಯಗಳೊಂದಿಗೆ ಸಮಾಜದ ಸಂಘಟನೆ, ಸಾಮಾಜಿಕ ಸೇವೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆ ವ್ಯಕ್ತವಾಗಿದೆ.