Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ಅಮ್ಟೂರಿನಲ್ಲಿ ಕಾಂಗ್ರೆಸ್ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ

ಅಮ್ಟೂರಿನಲ್ಲಿ ಕಾಂಗ್ರೆಸ್ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ

ಅಮ್ಟೂರು(ಬಂಟ್ವಾಳ): ವಲಯ ಕಾಂಗ್ರೆಸ್ ಅಮ್ಟೂರು ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅಮ್ಟೂರಿನ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮ್ಟೂರು ವಲಯ ಕಾಂಗ್ರೆಸ್ ಅಧ್ಯಕ್ಷ ರಾಘವ ಪೂಜಾರಿ ವಹಿಸಿದ್ದರು. ಪ್ರಗತಿಪರ ಕೃಷಿಕ ಮನಮೋಹನ ಕಟ್ಟೆಮಾರ್ ಅವರು ಧ್ವಜಾರೋಹಣ ನೆರವೇರಿಸಿದರು.

ಇದನ್ನೂ ಓದಿ: ಉದ್ಯಾನವನದ ಜಾಗದ ಮೇಲೆ ಸರ್ಕಾರದ ಹೊಸ ಕಣ್ಣು? ಶೇ.5ರಷ್ಟು ಬಳಕೆಗೆ ಅನುಮತಿ

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸ್ಪಂದನ ಸಮಾಜ ಸೇವಾ ಸಂಘ ಅಮ್ಟೂರು ಅಧ್ಯಕ್ಷ ಜಯಂತ ಕಟ್ಟೆಮಾರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಚಂದ್ರಶೇಖರ್ ರೈ ಬಾಳಿಕೆ ಹಾಗೂ ಮೆಸ್ಕಾಂ ಸಲಹಾ ಸಮಿತಿ ಸದಸ್ಯ ಮಹಮ್ಮದ್ ಕರಿಂಗಾಣ ಉಪಸ್ಥಿತರಿದ್ದರು.

ಇವರೊಂದಿಗೆ ಸುಲೈಮಾನ್ ನೆತ್ತಿಕಲ್ಲು, ವಿಕ್ಟರ್ ಡಿಸೋಜ, ಬಿ.ಎಸ್. ಕೋಡಿ, ಅಬೂಬಕ್ಕರ್ ನೆತ್ತಿಕಲ್ಲು, ಬಷೀರ್ ಕರಿಂಗಾಣ, ಲತೀಫ್ ನೆತ್ತಿಕಲ್ಲು, ಹಮೀದ್ ಕರಿಂಗಾಣ, ರಫೀಕ್ ಕರಿಂಗಾಣ, ಮಹಮ್ಮದ್ ಮುನಾಝ್ ಅಮ್ಟೂರು, ಗಣೇಶ್ ರೈ ಬೈದರಡ್ಕ, ಧನಂಜಯ ರೈ ಬಾಳಿಕೆ, ಅದ್ದಮಾಕ ಅಮ್ಟೂರು, ಇಬ್ರಾಹಿಂ ಅಮ್ಟೂರು, ಅಬ್ದುಲ್ ಖಾದರ್ ಹೊಯಿಗೆಗದ್ದೆ, ಹರೀಶ್ ಹೊಯಿಗೆಗದ್ದೆ, ಸತೀಶ್ ಹೊಯಿಗೆಗದ್ದೆ, ಸಿನಾನ್ ನೆತ್ತಿಕಲ್ಲು, ಹಮೀದ್ ನೆತ್ತಿಕಲ್ಲು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ: ಕರ್ನಾಟಕದಲ್ಲಿ ಹಸಿರು ವಿದ್ಯುತ್ ಇಂಧನ ಮತ್ತು ಭೌಗೋಳಿಕ ರಾಜಕೀಯದ ಅಡ್ಡಿ

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದೇಶದ ಏಕತೆ, ಸಮಗ್ರತೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸುವ ಸಂದೇಶವನ್ನು ಕಾರ್ಯಕ್ರಮದಲ್ಲಿ ಸಾರಲಾಯಿತು.

Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading