ಬಂಟ್ವಾಳ: ಜೈ ಭೀಮ್ ಫ್ರೆಂಡ್ಸ್ ಹಾಗೂ ಅಲೇರಿ ಶ್ರೀ ಸತ್ಯ ಸಾರಮಾನಿ ಕಾನದ ಕಟದ ವಗ್ಗ ಗ್ರಾಮ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ “ಕೆಸರುದ ಕಂಡೊಡು ಗೊಬ್ಬುದ ಗಮ್ಮತ್ 2026” ಕಾರ್ಯಕ್ರಮವು ಉತ್ತಮ ರೀತಿಯಲ್ಲಿ ನಡೆಯಿತು.
ಅಲೇರಿ ಶ್ರೀ ಸತ್ಯ ಸಾರಮಾನಿ ಕಾನದ ಕಟದ ಮೂಲಕ್ಷೇತ್ರ ಬಂಟ್ವಾಳ ತಾಲೂಕಿನ ಅಧ್ಯಕ್ಷರಾದ ಚಂದ್ರಹಾಸ ಅರ್ಬಿಗುಡ್ಡೆ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ತಿಕ್ ವಗ್ಗ, ವಸಂತ್, ಸಂದೀಪ್, ಭಾರತೀ ಸೇರಿದಂತೆ ಸಮಿತಿಯ ಸರ್ವ ಸದಸ್ಯರು ಹಾಗೂ ಯುವಕರ ಒಗ್ಗಟ್ಟು ಮತ್ತು ಸಂಯೋಜಕರ ಶಿಸ್ತು ಕಾರ್ಯಕ್ರಮದ ಯಶಸ್ಸಿಗೆ ಪ್ರಮುಖ ಕಾರಣವಾಯಿತು.
ಕಾರ್ಯಕ್ರಮದಲ್ಲಿ ಊರಿನ ಹಾಗೂ ಪರ ಊರಿನ ಸಮಾಜದವರನ್ನು ಗೌರವಿಸುವ ಮೂಲಕ ಸಂಘಟಕರು ಉತ್ತಮ ಬಾಂಧವ್ಯ ಮತ್ತು ಸಹೋದರತ್ವದ ಸಂದೇಶವನ್ನು ಸಾರಿದರು. ಯುವಕರ ಸಕ್ರಿಯ ಭಾಗವಹಿಸುವಿಕೆ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.
ಸಮುದಾಯದ ಯುವಕರು ಇದೇ ರೀತಿಯಲ್ಲಿ ಒಗ್ಗಟ್ಟಿನಿಂದ ಮುಂದುವರಿದು, ಮುಂದಿನ ದಿನಗಳಲ್ಲಿಯೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂಬುದು ತಾಲೂಕಿನ ಆಶಯವಾಗಿದೆ.
ಒಟ್ಟಾರೆ, “ಕೆಸರುದ ಕಂಡೊಡು ಗೊಬ್ಬುದ ಗಮ್ಮತ್ 2026” ಕಾರ್ಯಕ್ರಮವು ಉತ್ತಮ ಸಂಯೋಜನೆ, ಶಿಸ್ತು ಮತ್ತು ಯುವಕರ ಒಗ್ಗಟ್ಟಿನೊಂದಿಗೆ ಯಶಸ್ವಿಯಾಗಿ ನೆರವೇರಿತು.