ಬಂಟ್ವಾಳ: ಪುತ್ತೂರಿನಲ್ಲಿ ನಡೆದ ಮರಳು ಕಲೆಯ (Sand Art) ಸ್ಪರ್ಧೆಯಲ್ಲಿ ಭಾಗವಹಿಸಿದ ಬಂಟ್ವಾಳ ತಾಲೂಕಿನ ನೆರಳಕಟ್ಟೆ ನಿವಾಸಿ ಮಾಸ್ಟರ್ ಸೋಹನ್, ಕಿರಿಯ ವಯಸ್ಸಿನಲ್ಲೇ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ನೆರಳಕಟ್ಟೆಯ ಶ್ರೀಮತಿ ಶ್ವೇತಾ ಮತ್ತು ಕಮಲಾಕ್ಷ ದಂಪತಿಯ ಪುತ್ರನಾದ ಸೋಹನ್, ಚಿಕ್ಕ ವಯಸ್ಸಿನಲ್ಲೇ ಮರಳು ಕಲೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ವಿಶ್ವ ದಾಖಲೆ ನಿರ್ಮಿಸಿರುವುದು ಆದಿದ್ರಾವಿಡ ಸಮುದಾಯಕ್ಕೆ ಹೆಮ್ಮೆಯ ವಿಷಯವಾಗಿದೆ.
ಸೋಹನ್ ಅವರ ಈ ಸಾಧನೆಗೆ ಆದಿದ್ರಾವಿಡ ಸಮಾಜ ಸೇವಾ ಸಂಘ (ರಿ.), ಬಂಟ್ವಾಳ ತಾಲೂಕು, ಅಭಿನಂದನೆ ಸಲ್ಲಿಸಿದೆ. ಕಿರಿಯ ವಯಸ್ಸಿನಲ್ಲೇ ವಿಶ್ವ ದಾಖಲೆ ನಿರ್ಮಿಸುವ ಮೂಲಕ ಸಮುದಾಯಕ್ಕೆ ಕೀರ್ತಿ ತಂದಿರುವ ಸೋಹನ್ ಅವರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆಗಳು ಮೂಡಿಬರಲಿ ಹಾಗೂ ಉಜ್ವಲ ಭವಿಷ್ಯ ಅವರದಾಗಲಿ ಎಂದು ಸಂಘದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಶುಭ ಹಾರೈಸಿದ್ದಾರೆ.