Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ಎಸ್‌ಎಫ್‌ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಮಹಮ್ಮದ್ ಅಜ್ಲಾನ್ ಬೆಂಗ್ರೆ, ಕಾರ್ಯದರ್ಶಿಯಾಗಿ ವಿನಾಯಕ ಮಂಗಳೂರು ಆಯ್ಕೆ

ಎಸ್‌ಎಫ್‌ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಮಹಮ್ಮದ್ ಅಜ್ಲಾನ್ ಬೆಂಗ್ರೆ, ಕಾರ್ಯದರ್ಶಿಯಾಗಿ ವಿನಾಯಕ ಮಂಗಳೂರು ಆಯ್ಕೆ

ಮಂಗಳೂರು: ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ದಕ್ಷಿಣ ಕನ್ನಡ ಜಿಲ್ಲಾ ಸಮಾವೇಶವು ನಗರದ ಡಾನ್ ಬಾಸ್ಕೋ ಹಾಲ್‌ನಲ್ಲಿ ಬಿ.ಕೆ. ಇನಾಜ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಮಾವೇಶದಲ್ಲಿ ನೂತನ ಜಿಲ್ಲಾ ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಜಿಲ್ಲೆಯ ಜನಪದ ವಿದ್ವಾಂಸರು ಹಾಗೂ ನಿವೃತ್ತ ಪ್ರಾಂಶುಪಾಲರಾದ ಡಾ. ಗಣನಾಥ ಶೆಟ್ಟಿ ಎಕ್ಕಾರು ಸಮಾವೇಶವನ್ನು ಉದ್ಘಾಟಿಸಿದರು. ಎಸ್‌ಎಫ್‌ಐ ಕರ್ನಾಟಕ ರಾಜ್ಯಾಧ್ಯಕ್ಷ ಶಿವಪ್ಪ ಅಂಬಳಿಕಲ್ ಅವರು ಸಮಾವೇಶವು ಸುಸೂತ್ರವಾಗಿ ನಡೆಯುವಂತೆ ಮಾರ್ಗದರ್ಶನ ನೀಡಿದರು.

ಇದನ್ನೂ ಓದಿ: ಥೇರೀಗಾಥಾ: ಬೌದ್ಧ ಭಿಕ್ಷುಣಿಯರ ಅನುಭವದ ಗೀತೆಗಳು

ಸಮಾವೇಶದಲ್ಲಿ ಮುಂದಿನ ಸಾಲಿನ ಎಸ್‌ಎಫ್‌ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯನ್ನು ಆಯ್ಕೆಗೊಳಿಸಲಾಗಿದ್ದು, ಜಿಲ್ಲಾಧ್ಯಕ್ಷರಾಗಿ ಮಹಮ್ಮದ್ ಅಜ್ಲಾನ್ ಬೆಂಗ್ರೆ ಹಾಗೂ ಜಿಲ್ಲಾ ಕಾರ್ಯದರ್ಶಿಯಾಗಿ ವಿನಾಯಕ ಮಂಗಳೂರು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ನೂತನ ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾಗಿ ಲಿಖಿತ್ ವಾಮಂಜೂರು, ಅಲ್ಮಾಸ್, ರೋನ್ ಸನ್ ಡಿಸೋಜ, ಅವಿಶಾ ಡಿಸೋಜ (ಪಂಜಿಮೊಗರು), ಸಮನ್ವಿ ಬಜಾಲ್, ಪ್ರೇಮ್ ಮದ್ಯ ಮತ್ತು ಮಿನಹಾಜ್ ದೇರಳಕಟ್ಟೆ ಅವರನ್ನು ಆಯ್ಕೆ ಮಾಡಲಾಗಿದೆ.

ಸಹ ಕಾರ್ಯದರ್ಶಿಗಳಾಗಿ ಚಿರಾಗ್ ಕುತ್ತಾರ್, ಇಶಾನ್, ಶ್ರಮಾ, ಇಂಚರಾ ಎಸ್. ಬಜಾಲ್, ಸನನ್ವಿ ಬಜಾಲ್, ನೋಯಲ್ ಸ್ಟೀಫನ್ ಡಿಸೋಜ, ಶಯಾನ್ ಹಾಗೂ ರಂಜಿತ್ ಕೊಯ್ಯೂರು ಅವರನ್ನು ಆಯ್ಕೆ ಮಾಡಲಾಗಿದೆ.

ಇದಲ್ಲದೆ, ಜಿಲ್ಲೆಯ ವಿವಿಧ ಕಾಲೇಜುಗಳಿಂದ ಒಟ್ಟು 35 ಮಂದಿಯನ್ನು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ: ದೆಹಲಿ ಪೊಲೀಸ್‌ ಸಿಬ್ಬಂದಿಯಿಂದ ಜೆನ್ Z ಪ್ರತಿಭಟನಕಾರನ ಮುಖಕ್ಕೆ ಮುಷ್ಟಿ ಏಟು? ವಿಡಿಯೋ ವೈರಲ್

ಸಮಾವೇಶದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕುಗಳು, ಶಿಕ್ಷಣ ಕ್ಷೇತ್ರದ ಸವಾಲುಗಳು ಹಾಗೂ ಸಂಘಟನೆಯ ಮುಂದಿನ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಸಲಾಯಿತು. ನೂತನ ಸಮಿತಿಯು ಜಿಲ್ಲೆಯ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುವ ಜೊತೆಗೆ ವಿದ್ಯಾರ್ಥಿ ಹೋರಾಟಗಳನ್ನು ಮತ್ತಷ್ಟು ಬಲಪಡಿಸುವ ಸಂಕಲ್ಪ ವ್ಯಕ್ತಪಡಿಸಿತು.

Web Add
ವಾಹನ ಸಂಚಾರದ ವಿಚಾರಕ್ಕೆ ಗಲಾಟೆ: 30 ವರ್ಷದ ವ್ಯಕ್ತಿ ಕೊಲೆ!
ವಾಹನ ಸಂಚಾರದ ವಿಚಾರಕ್ಕೆ ಗಲಾಟೆ: 30 ವರ್ಷದ ವ್ಯಕ್ತಿ ಕೊಲೆ!
ಕಿರಿಯ ವಯಸ್ಸಿನಲ್ಲೇ ವಿಶ್ವ ದಾಖಲೆ ಬರೆದ ಮಾಸ್ಟರ್ ಸೋಹನ್; ಆದಿದ್ರಾವಿಡ ಸಮುದಾಯಕ್ಕೆ ಹೆಮ್ಮೆ
ಕಿರಿಯ ವಯಸ್ಸಿನಲ್ಲೇ ವಿಶ್ವ ದಾಖಲೆ ಬರೆದ ಮಾಸ್ಟರ್ ಸೋಹನ್; ಆದಿದ್ರಾವಿಡ ಸಮುದಾಯಕ್ಕೆ ಹೆಮ್ಮೆ
ಫಾರ್ಮ್-6, 6A, 7, 8ರಲ್ಲಿ ಸುಳ್ಳು ಅರ್ಜಿ ಸಲ್ಲಿಸಿದ್ರೆ ಕ್ರಮ: CEO ಅನ್ಬುಕುಮಾರ್ ಸೂಚನೆ
ಫಾರ್ಮ್-6, 6A, 7, 8ರಲ್ಲಿ ಸುಳ್ಳು ಅರ್ಜಿ ಸಲ್ಲಿಸಿದ್ರೆ ಕ್ರಮ: CEO ಅನ್ಬುಕುಮಾರ್ ಸೂಚನೆ
ಮಹಾರಾಷ್ಟ್ರದಲ್ಲಿ ದುರಂತ: ಪ್ರವಾಸಕ್ಕೆ ತೆರಳಿದ್ದ 8 ವಿದ್ಯಾರ್ಥಿಗಳು ಸಮುದ್ರದಲ್ಲಿ ಮುಳುಗಿ ಸಾವು
ಮಹಾರಾಷ್ಟ್ರದಲ್ಲಿ ದುರಂತ: ಪ್ರವಾಸಕ್ಕೆ ತೆರಳಿದ್ದ 8 ವಿದ್ಯಾರ್ಥಿಗಳು ಸಮುದ್ರದಲ್ಲಿ ಮುಳುಗಿ ಸಾವು
ಸೌಜನ್ಯ ಪ್ರಕರಣದ ಮರುತನಿಖೆಗೆ SIT ರಚನೆ: ಆದೇಶದ ಕಾನೂನು ಚೌಕಟ್ಟು ಹಾಗೂ ಆಕ್ಷೇಪಗಳ ಪೂರ್ಣ ವಿಶ್ಲೇಷಣೆ
ಸೌಜನ್ಯ ಪ್ರಕರಣದ ಮರುತನಿಖೆಗೆ SIT ರಚನೆ: ಆದೇಶದ ಕಾನೂನು ಚೌಕಟ್ಟು ಹಾಗೂ ಆಕ್ಷೇಪಗಳ ಪೂರ್ಣ ವಿಶ್ಲೇಷಣೆ
ಎಸ್‌ಐಆರ್‌ ಕುರಿತು ಚುನಾವಣಾ ಆಯೋಗದ ಸ್ಪಷ್ಟನೆ
ಎಸ್‌ಐಆರ್‌ ಕುರಿತು ಚುನಾವಣಾ ಆಯೋಗದ ಸ್ಪಷ್ಟನೆ
Fake ತೃತೀಯಲಿಂಗಿಗಳ ವೇಷದಲ್ಲಿ BMW ಮಾಲೀಕರಿಂದ ₹5,000 ಬೇಡಿಕೆ: ನಾಲ್ವರು ಬಂಧನ
Fake ತೃತೀಯಲಿಂಗಿಗಳ ವೇಷದಲ್ಲಿ BMW ಮಾಲೀಕರಿಂದ ₹5,000 ಬೇಡಿಕೆ: ನಾಲ್ವರು ಬಂಧನ
ಬೆನ್ನಿಗೆ ಹಾಕಿದ್ದ ಗಿಟಾರ್‌ಗೆ ₹500 ದಂಡ!?AI ಕ್ಯಾಮೆರಾ! ಎಡವಟ್ಟು
ಬೆನ್ನಿಗೆ ಹಾಕಿದ್ದ ಗಿಟಾರ್‌ಗೆ ₹500 ದಂಡ!?AI ಕ್ಯಾಮೆರಾ! ಎಡವಟ್ಟು
₹500 ನೋಟುಗಳನ್ನು ಬಳಸಿ ವಂಚನೆಗೆ ಯತ್ನ: ಇಬ್ಬರು ಮಹಿಳೆಯರು ಸೇರಿದಂತೆ ಮೂವರ ಬಂಧನ!
₹500 ನೋಟುಗಳನ್ನು ಬಳಸಿ ವಂಚನೆಗೆ ಯತ್ನ: ಇಬ್ಬರು ಮಹಿಳೆಯರು ಸೇರಿದಂತೆ ಮೂವರ ಬಂಧನ!
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ ನಿಧನ; 64ನೇ ವಯಸ್ಸಿನಲ್ಲಿ ಕೊನೆಯುಸಿರು
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ ನಿಧನ; 64ನೇ ವಯಸ್ಸಿನಲ್ಲಿ ಕೊನೆಯುಸಿರು
ಕಾನೂನಿನ ಮುಂದೆ ಮುಖ್ಯಮಂತ್ರಿ ಕೂಡ ಸಾಮಾನ್ಯ ನಾಗರಿಕರೇ: ಬಿಜೆಪಿ
ಕಾನೂನಿನ ಮುಂದೆ ಮುಖ್ಯಮಂತ್ರಿ ಕೂಡ ಸಾಮಾನ್ಯ ನಾಗರಿಕರೇ: ಬಿಜೆಪಿ
ತಲೆಮಾರುಗಳ ತಲೆನೋವು – ಸೋಸಲೆಗಂಗಾಧರ್
ತಲೆಮಾರುಗಳ ತಲೆನೋವು – ಸೋಸಲೆಗಂಗಾಧರ್
ಚಿತ್ರಮಂದಿರದೊಳಗೆ ತಲೆ ಮೇಲೆ ಬಿದ್ದ ಸೀಲಿಂಗ್
ಚಿತ್ರಮಂದಿರದೊಳಗೆ ತಲೆ ಮೇಲೆ ಬಿದ್ದ ಸೀಲಿಂಗ್
ಜಂತರ್‌ ಮಂತರ್‌ ಪ್ರತಿಭಟನೆ: ನೆಹಾ ಬೋರಾ ಸೇರಿ 500ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ
ಜಂತರ್‌ ಮಂತರ್‌ ಪ್ರತಿಭಟನೆ: ನೆಹಾ ಬೋರಾ ಸೇರಿ 500ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ
ಆನೆಗೆ ಡಿಕ್ಕಿ ಹೊಡೆಯಲು ಯತ್ನಿಸಿದ ಟ್ರಕ್ ಚಾಲಕನಿಗೆ ₹5,000 ದಂಡ
ಆನೆಗೆ ಡಿಕ್ಕಿ ಹೊಡೆಯಲು ಯತ್ನಿಸಿದ ಟ್ರಕ್ ಚಾಲಕನಿಗೆ ₹5,000 ದಂಡ
ಮತ್ತೆ ಮಾಂಜಾ ದಾರಕ್ಕೆ ಸಿಲುಕಿ ಮತ್ತೊಂದು ಸಾವು: ಬೆಳಗಾವಿಯಲ್ಲಿ 19 ವರ್ಷದ ITI ವಿದ್ಯಾರ್ಥಿ ದಾರುಣ ಅಂತ್ಯ
ಮತ್ತೆ ಮಾಂಜಾ ದಾರಕ್ಕೆ ಸಿಲುಕಿ ಮತ್ತೊಂದು ಸಾವು: ಬೆಳಗಾವಿಯಲ್ಲಿ 19 ವರ್ಷದ ITI ವಿದ್ಯಾರ್ಥಿ ದಾರುಣ ಅಂತ್ಯ
ಡಿಎಸ್ಎಸ್ ಮುಖಂಡ ದಾಸಪ್ಪ ಪಿ.ಬಿ. ಪಲ್ಲತ್ತಡ್ಕ ನಿಧನ
ಡಿಎಸ್ಎಸ್ ಮುಖಂಡ ದಾಸಪ್ಪ ಪಿ.ಬಿ. ಪಲ್ಲತ್ತಡ್ಕ ನಿಧನ
ಚುನಾವಣಾ ಆಯೋಗದ ಬಿಕ್ಕಟ್ಟು: ರಾಜೀನಾಮೆ ಪರಿಹಾರವೇ ಅಥವಾ ಸಾಂವಿಧಾನಿಕ ಪುನಾರಚನೆ ಅನಿವಾರ್ಯವೇ?
ಚುನಾವಣಾ ಆಯೋಗದ ಬಿಕ್ಕಟ್ಟು: ರಾಜೀನಾಮೆ ಪರಿಹಾರವೇ ಅಥವಾ ಸಾಂವಿಧಾನಿಕ ಪುನಾರಚನೆ ಅನಿವಾರ್ಯವೇ?
ನಕಲಿ ಔಷಧ ಜಾಲದ ಆರೋಪ: ಶಾರ್ಜಾದಿಂದ ಬಂದ ಪ್ರಶಾಂತ್ ಎಸ್‌ಐಟಿ ವಶಕ್ಕೆ
ನಕಲಿ ಔಷಧ ಜಾಲದ ಆರೋಪ: ಶಾರ್ಜಾದಿಂದ ಬಂದ ಪ್ರಶಾಂತ್ ಎಸ್‌ಐಟಿ ವಶಕ್ಕೆ
ಥೇರೀಗಾಥಾ: ಬೌದ್ಧ ಭಿಕ್ಷುಣಿಯರ ಅನುಭವದ ಗೀತೆಗಳು
ಥೇರೀಗಾಥಾ: ಬೌದ್ಧ ಭಿಕ್ಷುಣಿಯರ ಅನುಭವದ ಗೀತೆಗಳು
MRPL ಆವರಣದಲ್ಲಿ ಭಾರೀ ಸದ್ದು; ದಟ್ಟ ಹೊಗೆ, ಸ್ಥಳೀಯರಲ್ಲಿ ಆತಂಕ
MRPL ಆವರಣದಲ್ಲಿ ಭಾರೀ ಸದ್ದು; ದಟ್ಟ ಹೊಗೆ, ಸ್ಥಳೀಯರಲ್ಲಿ ಆತಂಕ
ದೆಹಲಿ ಪೊಲೀಸ್‌ ಸಿಬ್ಬಂದಿಯಿಂದ ಜೆನ್ Z ಪ್ರತಿಭಟನಕಾರನ ಮುಖಕ್ಕೆ ಮುಷ್ಟಿ ಏಟು? ವಿಡಿಯೋ ವೈರಲ್
ದೆಹಲಿ ಪೊಲೀಸ್‌ ಸಿಬ್ಬಂದಿಯಿಂದ ಜೆನ್ Z ಪ್ರತಿಭಟನಕಾರನ ಮುಖಕ್ಕೆ ಮುಷ್ಟಿ ಏಟು? ವಿಡಿಯೋ ವೈರಲ್
Prajapara News Kannada

Discover more from Prajapara News

Subscribe now to keep reading and get access to the full archive.

Continue reading