Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
ಬೀದಿಬದಿ ವ್ಯಾಪಾರಿಗಳ ವಿರುದ್ಧ ನೈತಿಕ ಪೊಲೀಸ್‌ಗಿರಿ: ಕ್ರಮಕ್ಕೆ ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ ಒತ್ತಾಯಎಚ್ಚರ..! ಮೊಬೈಲ್‌ನಲ್ಲಿ ಈ APK ಆ್ಯಪ್ ಇನ್‌ಸ್ಟಾಲ್ ಮಾಡಿದ್ರೆ OTP ಕಳ್ಳತನ, ಬ್ಯಾಂಕ್ ಖಾತೆ ಖಾಲಿFACT CHECK ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಕ್ರಮಿ ಮತಾಂಧರು ಊರು ತೊರೆಯುತ್ತಿದ್ದಾರೆ ವಿಡಿಯೋದ ಅಸಲಿಯತ್ತು ಏನು?ನಾಳೆ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ.ದಕ್ಷಿಣ ಕನ್ನಡದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿದ್ದೆಯೇ ಬಿಎಸ್ಪಿ?ದೇರಳಕಟ್ಟೆ ಆಸ್ಪತ್ರೆ ಜಂಕ್ಷನ್‌ನಲ್ಲಿ ಕೊಳಚೆ ನೀರಿನ ಸಮಸ್ಯೆ : ತಕ್ಷಣ ಕ್ರಮಕ್ಕೆ ಸಿಪಿಐ(ಎಂ) ಆಗ್ರಹಅಧಿಕಾರಿಗಳ ನಿರ್ಲಕ್ಷ್ಯ: ದಳವಾಯಿಹಳ್ಳಿಯ ನೀರಿನ ಸಮಸ್ಯೆಗೆ ಸ್ಪಂದಿಸಿ ಮಾನವೀಯತೆ ಮೆರದ ಪ್ರೊ. ಹರಿರಾಮ್‘ಕಾಕ್ರೋಚ್ ಜನತಾ ಪಾರ್ಟಿ’ ಹಿಂದೆ ಇರುವ ಅಜೆಂಡಾ ಏನು? – ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹೊಸ ರಾಜಕೀಯ ವ್ಯಂಗ್ಯ ಚಳವಳಿ • 🔥
Advertisement

ಹೊಸ ತಲೆಮಾರು ಮತ್ತು ನಮ್ಮ ದೇಶ – ಹರಿರಾಮ್‌ ರವರ ಲೇಖನ

ಹೊಸ ತಲೆಮಾರು ಮತ್ತು ನಮ್ಮ ದೇಶ – ಹರಿರಾಮ್‌ ರವರ ಲೇಖನ

ಯಾವುದೇ ವ್ಯವಸ್ಥೆ ಅಥವಾ ಸಮಾಜವೂ ನಿಂತ ನೀರಾಗಿ ಉಳಿಯಬಾರದು, ಅದು ಸದಾ ಚಲಿಸುವ ನೀರಿನಂತೆ ಪ್ರತಿ ಕ್ಷಣವೂ ಬದಲಾವಣೆಯ ಭಾಗವಾಗಿ ರೂಪಾಂತರಗೊಳ್ಳುತ್ತ ಸಾಗಬೇಕು. ಹಾಗೆ ಇದ್ದಾಗ ಮಾತ್ರ ಅದಕ್ಕೆ ಜೀವಂತಿಕೆ ಇದೆ ಎಂದು ಅರ್ಥ,ಇಲ್ಲದಿದ್ದರೆ ಆ ವ್ಯವಸ್ಥೆ ಅಥವಾ ಸಮಾಜ ಸತ್ತು ಹೋಗಿದೆ ಎಂದರ್ಥ, ನಮ್ಮ ದೇಶದಲ್ಲಿ ಸಮಾಜದ ಜೊತೆಗೆ ರಾಜಕೀಯ ವ್ಯವಸ್ಥೆಯು ಕೂಡ ಕಾಲ ಕಾಲಕ್ಕೆ ಬದಲಾಗುತ್ತಾ ಬಂದಿದೆ, ಈಗ ಸದ್ಯಕ್ಕೆ ನಮ್ಮ ದೇಶದಲ್ಲಿ ಅಂದರೆ 1935 ರ ನಂತರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯು ಸ್ಥಾಪಿತಗೊಂಡು,ಆ ವ್ಯವಸ್ಥೆಯಿಂದ ನಮ್ಮ ಪ್ರತಿನಿಧಿಗಳನ್ನು ನಾವೇ ಆಯ್ಕೆ ಮಾಡಿಕೊಂಡು ಅವರ ಮುಖಾಂತರ ನಮ್ಮ ಸರ್ಕಾರಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. 1952 ರಲ್ಲಿ ಸ್ವತಂತ್ರ ಭಾರತದ ಮೊಟ್ಟಮೊದಲ ಚುನಾವಣೆಯು ನಡೆಯಿತು, ಅಂದಿನಿಂದ ಇಂದಿನವರೆಗೂ ಈ ದೇಶದ ಪ್ರೆಜೆಗಳು ಬದಲಾವಣೆಯ ಕನಸುಗಳನ್ನು ಹೊತ್ತು ಕಾಯುತ್ತಾ, ಇಂದು ಅಥವಾ ನಾಳೆ ಖಂಡಿತವಾಗಿಯೂ ದೇಶವು ಬದಲಾಗುತ್ತೆ, ನಮ್ಮ ಪರಿಸ್ಥಿತಿಗಳು ಬದಲಾಗುತ್ತವೆ ಎಂಬ ಆಶಯವನ್ನು ಹೊತ್ತು ಕಾಯುತ್ತಲೆ ಇದ್ದಾರೆ, ಆದರೆ ವಾಸ್ತವದಲ್ಲಿ ಮಾತ್ರ ಈ ನಿಟ್ಟಿನಲ್ಲಿ ಯಾವುದೇ ಪ್ರಯತ್ನವಾಗಲಿ ಅಥವಾ ಯೋಚನೆಯಾಗಲಿ ಈ ದೇಶದಲ್ಲಿ ಇಂದಿಗೂ ಪ್ರಾರಂಭವಾಗಿಲ್ಲ.

ಸಮಾಜದಲ್ಲಿ ಅಥವಾ ವ್ಯವಸ್ತೆಯಲ್ಲಿ ಬದಲಾವಣೆಯು ಸಾಧ್ಯವಾಗುವುದು ಹೊಸ ಆಲೋಚನೆಗಳನ್ನು ಒಳಗೊಂಡಿರುವ ಹೊಸ ತಲಮಾರಿನ ಒಳಗೊಳ್ಳುವಿಕೆಯಿಂದ ಮಾತ್ರ. ಬಹಳ ಮುಖ್ಯವಾಗಿ ಒಂದು ವ್ಯವಸ್ಥೆ ಅಥವಾ ದೇಶ ಮುಂದುವರಿಯಲು ಹಾಗೂ ಬದಲಾವಣೆಯನ್ನು ಕಾಣಲು ಶಿಕ್ಷಣ ಹಾಗೂ ರಾಜಕೀಯವು ಮಹತ್ತರವಾದ ಪಾತ್ರವನ್ನು ವಹಿಸುತ್ತದೆ ಶಿಕ್ಷಣದ ಕ್ಷೇತ್ರದಲ್ಲಿ ನಾವು ಒಂದಿಷ್ಟು ಸಾಧನೆಯನ್ನು ಮಾಡಿದ್ದೇವೆ, 1906 ರಲ್ಲಿ 6% ಇದ್ದ ಸಾಕ್ಷರತೆಯು ಇಂದು 74% ಗೆ ಬಂದು ನಿಂತಿದೆ ಆದರೆ ಇನ್ನೂ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಹಿಂದುಳಿದ ತಾಲೂಕು ಮತ್ತು ಜಿಲ್ಲೆಗಳಲ್ಲಿ ಸಾಕ್ಷರತೆಯನ್ನು ನಾವು ಎಣಿಸಿದಷ್ಟು ಸಾಧಿಸಲು ಸಾಧ್ಯವಾಗಿಲ್ಲ. ಉದಾಹರಣೆಗೆ, ಬೆಂಗಳೂರಿನಿಂದ ಸುಮಾರು 200 ಕಿಲೋ ಮೀಟರ್ ದೂರದಲ್ಲಿರುವ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ, SC ಗಳ ಸಾಕ್ಷರತೆಯು ಕೇವಲ 21%, ST ಗಳ ಸಾಕ್ಷರತೆಯು 17% ಹಾಗೆಯೇ ಸಾಮಾನ್ಯರ ಸಾಕ್ಷರತೆಯು 52% ಮಾತ್ರ ಎಂಬುದು ಆಘಾತಕರವಾದ ಸತ್ಯ. ಈ ಸ್ಥಿತಿಗೆ ಯಾರು ಹೊಣೆ ? ನಮ್ಮ ಸಮಾಜವೋ ? ಅಥವಾ ರಾಜಕೀಯ ವ್ಯವಸ್ಥೆಯೋ ? ಎಂಬುದನ್ನು ನಾವು ಯೋಚಿಸಬೇಕಿದೆ, ಏಕೆಂದರೆ, ನಮ್ಮ ದೇಶಕ್ಕೆ ಸ್ವತಂತ್ರ ದೊರಕಿದ ನಂತರ ನಮ್ಮದೇ ನಾಯಕತ್ವವು ನಮ್ಮನ್ನು ಅಭಿವೃದ್ಧಿಯ ಕಡೆಗೆ ಸಾಗಿಸಬೇಕಿತ್ತು, ನಾವು ಇಂದಿಗೆ ಎರಡನೇ ತಲಮಾರಿನ ರಾಜಕಾರಣಿಗಳನ್ನು ನೋಡುತ್ತಿದ್ದೇವೆ. ಒಂದಿಷ್ಟು ಮೂರನೇ ತಲಮಾರಿನ ರಾಜಕಾರಣಿಗಳನ್ನು ನೋಡುತ್ತಿದ್ದೇವೆ. ರಾಜಕೀಯಕ್ಕೆ ಹೊಸ ತಲಮಾರು ಬರಬೇಕು ಎಂದು ಎಲ್ಲರೂ ಮಾತನಾಡುತ್ತಾರೆ ಅಂತಯೇ ಒಂದಿಷ್ಟು ಹೊಸಬರಿಗೆ ಹೊಸತಲಮಾರಿನ ಕೋಟದಡಿ ರಾಜಕೀಯ ಅವಕಾಶವನ್ನು ಕಲ್ಪಿಸಿ ಅವರನ್ನು ಶಾಸಕರನ್ನಾಗಿ ಹಾಗೂ ಮಂತ್ರಿಗಳನ್ನಾಗಿಯೂ ಮಾಡಲಾಗಿದೆ. ಆದರೆ ವ್ಯವಸ್ಥೆಯಲ್ಲಿ ಮಾತ್ರ ಯಾವುದೇ ಮಹತ್ತರವಾದ ಬದಲಾವಣೆ ಮಾತ್ರ ಕಾಣಲು ಸಾಧ್ಯವಾಗುತ್ತಿಲ್ಲ ಯಾಕೆ? ಯಾಕೆಂದರೆ, ಬಹುಶಃ ನಾವು ಹೊಸ ತಲಮಾರು ಎಂಬ ಪದದ ಅರ್ಥವನ್ನೇ ಅಪಾರ್ಥ ಮಾಡಿಕೊಂಡಿದ್ದೇವೆ ಎಂದನಿಸುತ್ತದೆ, ಏಕೆಂದರೆ ಹೊಸ ತಲೆಮಾರು ಎಂದರೆ ಯಾರು ? ಹೊಸ ತಲೆಮಾರು ಎಂದರೆ ಅದು ಕೇವಲ ಒಂದು ಕಾಲಘಟ್ಟದಲ್ಲಿ ಹುಟ್ಟಿರುವ ಪೀಳಿಗೆ ಮಾತ್ರ ಅಲ್ಲ, ಹೊಸ ಆಲೋಚನೆಗಳನ್ನು ಹಾಗೂ ಕನಸುಗಳನ್ನು ಕಟ್ಟಿಕೊಂಡು ಸಮಾಜದಲ್ಲಿ ವ್ಯವಸ್ಥಿತವಾಗಿ ಬದಲಾವಣೆಯನ್ನು ಕಾಣುವ ಆಶಯಗಳನ್ನು ಹೊತ್ತುಕೊಂಡು ಕಾದು ಕೂತಿರುವ ತಳೆಮಾರು ಎಂದರ್ಥ. ದುರಂತವೆಂದರೆ ಇಂತಹ ನಿಜವಾದ ಹೊಸ ತಲೆಮಾರಿಗೆ ನಮ್ಮ ವ್ಯವಸ್ಥೆಯಲ್ಲಿ ಯಾವುದೇ ಅವಕಾಶಗಳು ಸಿಗದೇ ಇರುವುದು ಮಾತ್ರ ವಾಸ್ತವ. ಹೊಸ ತಲೆಮಾರು ಎಂದರೆ ಯಾವುದೋ ಒಂದು ಸ್ಥಾಪಿತ ಕುಟುಂಬ ಅಥವಾ ವ್ಯಕ್ತಿಯ ಮಗ,ಮಗಳು, ಅಳಿಯ,ಮೊಮ್ಮಗ ಅಥವಾ ತಮ್ಮದೇ ಕುಟುಂಬದ ಯಾವುದೋ ಒಂದು ಕುಡಿಯನ್ನು ಮುಂದೆ ನಿಲ್ಲಿಸಿ ತಗೋ ಹೊಸ ತಲಮಾರುಗಳನ್ನು ಸಮಾಜಕ್ಕೆ ಅರ್ಪಿಸುತ್ತಿದ್ದೇವೆ ಎಂದು ಅವರಿಗೆ ಅವಕಾಶಗಳನ್ನು ಮಾಡಿಕೊಟ್ಟು ಅವರಿಂದ ಹೊಸದನ್ನು ಅಥವಾ ಬದಲಾವಣೆಯನ್ನು ನಿರೀಕ್ಷಿಸಿ ಕುರುವುದಲ್ಲ.
ಉದಾ: ರಾಮಲಿಂಗ ರೆಡ್ಡಿಯ ಮಗಳು ಹೇಗೆ ಹೊಸ ಆಲೋಚನೆಗಳನ್ನು ರೂಪಿಸಿಕೊಳ್ಳಲು, ಬದಲಾವಣೆಯ ಆಲೋಚನೆಗಳನ್ನು ಒಯ್ಯಲು ಸಾಧ್ಯ ? ತನ್ನ ತಂದೆಯನ್ನೇ ನೋಡಿಕೊಂಡು ಬೆಳೆದು, ಸಮಾಜದಲ್ಲಿ ಯಾವುದೇ ರೀತಿಯ ಒಳಗೊಳ್ಳುವಿಕೆ ಇರದೆ, ಹೊಸ ತಲೆಮಾರಿನ ಆಶಯಗಳ ಅರಿವಿಲ್ಲದಿರುವ ಆಕೆ ಹೊಸ ನಾಯಕತ್ವವನ್ನು ಕೊಡಲು ಹೇಗೆ ಸಾಧ್ಯ ? ಹಾಗೆಯೇ, ಮಲ್ಲಿಕಾರ್ಜುನ ಖರ್ಗೆಯವರ ಮಗ ಪ್ರಿಯಾಂಕ ಖರ್ಗೆ, ಕೆ.ಎಚ್. ಮುನಿಯಪ್ಪರವರ ಮಗಳಾದ ರೂಪಕಲಾ ಶಶಿಧರ್, ಸತೀಶ್ ಜಾರಕಿಯೋಳಿಯ ಮಗ, ಯಡಿಯೂರಪ್ಪನವರ ಮಕ್ಕಳು, ಕುಮಾರಸ್ವಾಮಿ ಅವರ ಮಗ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ ಇಂತವರಿಂದ ನಾವು ಹೇಗೆ ಹೊಸ ಆಲೋಚನೆಗಳನ್ನು ಹಾಗೂ ಬದಲಾವಣೆಯನ್ನು ಬಯಸಲು ಸಾಧ್ಯ? ನಿಜವಾದ ಹೊಸ ತಲೆಮಾರು ಹಳೆಯ ಮತ್ತು ಹೊಸ ಸಮಸ್ಯೆಗಳ ಜಂಜಾಟದಲ್ಲಿ ಸಿಕ್ಕಿಹಾಕಿಕೊಂಡು, ಆ ಸಮಸ್ಯೆಗಳಿಂದ ಹೊರಬರಲಾಗದೆ ವ್ಯವಸ್ಥೆಗೆ ಶಾಪ ಹಾಕುತ್ತಾ, ಆ ಸಮಸ್ಯೆಗಳಿಗೆ ತಮ್ಮದೇ ಆದ ಪರಿಹಾರಗಳನ್ನು ಕೂಡ ರೂಪಿಸಿಕೊಂಡು ಈ ವ್ಯವಸ್ಥೆ ಮತ್ತು ಸಮಾಜವನ್ನು ಬದಲಾಯಿಸಲು ಅನೇಕ ಕನಸುಗಳನ್ನು ಹೊತ್ತುಕೊಂಡು ಕಾದು ಕೂತಿದ್ದಾರೆ,ಆದರೆ ಅವರಿಗೆ ಯಾವುದೇ ರಾಜಕೀಯ ಬೆಂಬಲವಾಗಲಿ, ರಾಜಕಾರಣಿಗಳ ಬೆಂಬಲವಾಗಲಿ ಅಥವಾ ವ್ಯವಸ್ಥೆಯ ಬೆಂಬಲವಾಗಲಿ ಇಲ್ಲದೆ, ಕನಸಿದ್ದರು ಅದನ್ನು ಸಕಾರ ಗೊಳಿಸಿಕೊಳ್ಳುವ ಶಕ್ತಿ ಇಲ್ಲದೆ ಕಾದು ಕೂತಿದ್ದಾರೆ, ಬಹುಷಃ ಇಂತಹ ತಲೆಮಾರಿಗೆ ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದೆ ಆದರೆ ಖಂಡಿತವಾಗಿಯೂ ದೇಶವು ಬದಲಾಗುತ್ತದೆ, ಸಮಸ್ಯೆಗಳು ಮಾಯವಾಗುತ್ತವೆ ಮತ್ತೆ ಹೊಸ ಸಮಸ್ಯೆಗಳಿಗೆ ಹೊಸ ತಲೆಮಾರು ಉತ್ತರಗಳನ್ನು ಕಂಡುಕೊಳ್ಳುತ್ತದೆ.

ಇದನ್ನೂ ಓದಿ: ಅಧಿಕಾರಿಗಳ ನಿರ್ಲಕ್ಷ್ಯ: ದಳವಾಯಿಹಳ್ಳಿಯ ನೀರಿನ ಸಮಸ್ಯೆಗೆ ಸ್ಪಂದಿಸಿ ಮಾನವೀಯತೆ ಮೆರದ ಪ್ರೊ. ಹರಿರಾಮ್

ನಿಜವಾದ ಹೊಸ ತಲೆಮಾರಿಗೆ ಸೇರಿದ ಪೀಳಿಗೆಯು ದೊಡ್ಡ ದೊಡ್ಡ ಕನಸುಗಳನ್ನು ಹೊತ್ತುಕೊಂಡು ಅನೇಕ ರಾಜಕೀಯ ಪಕ್ಷಗಳಲ್ಲಿ ಸೇರಿಕೊಂಡು ಇಂದಲ್ಲ ನಾಳೆ ನಮಗೆ ಅವಕಾಶ ಸಿಗಬಹುದು, ಸಿಕ್ಕ ಅವಕಾಶವನ್ನು ಬಳಸಿಕೊಂಡು ಮಹತ್ತರವಾದ ಬದಲಾವಣೆಯನ್ನು ತರಬಹುದು ಎಂಬ ಕನಸುಗಳನ್ನು ಹೊತ್ತು ಇಂದಿಗೂ ಪಕ್ಷಗಳ ಕೈ ಆಳುಗಳಾಗಿ, ಪಕ್ಷಗಳ, ಪ್ರಚಾರಕರಾಗಿ, ಸದಾ ಪಕ್ಷದ ಬಗ್ಗೆ, ಪಕ್ಷ ಸಂಘಟನೆಯ ಬಗ್ಗೆ ಯೋಚಿಸುತ್ತಾ ದುಡಿಯುತ್ತಾ, ತಮ್ಮ ಕನಸುಗಳನ್ನು ಸಕಾರ ಗೊಳಿಸಿಕೊಳ್ಳಬೇಕು ಎಂಬ ಆಶಯದೊಂದಿಗೆ ತಮ್ಮ ಬುದ್ಧಿ ಮತ್ತು ಆಯುಷ್ಯನ್ನು ಕಳೆಯುತ್ತಾ ತಮ್ಮ ನಾಯಕರುಗಳ ಅಟ್ಟಹಾಸ ಬೈಗುಳ ತಿರಸ್ಕಾರ ಹಾಗೂ ಅಹಂಕಾರಗಳನ್ನು ಸಹಿಸಿಕೊಂಡು ಕಾದು ಕೂತಿದ್ದಾರೆ, ಇಂತಹ ತಲೆಮಾರಿಗೆ ರಾಜಕೀಯ ಪಕ್ಷಗಳು ಮತ್ತು ನಾಯಕರುಗಳು ಅವಕಾಶಗಳನ್ನು ನೀಡದಿದ್ದರೆ, ಈ ತಲಮಾರು ತಮ್ಮ ಕನಸುಗಳನ್ನು ಮಾತ್ರ ಕಳೆದುಕೊಳ್ಳಬಹುದು ಆದರೆ ನಮ್ಮ ದೇಶವು ಮಾತ್ರ ತನ್ನ ಭವಿಷ್ಯವನ್ನು ಕಳೆದುಕೊಳ್ಳುತ್ತದೆ.

ಕೇವಲ ಪಕ್ಷ ಮತ್ತು ಸಿದ್ಧಾಂತಗಳಿಂದ ಮಾತ್ರ ಯಾವುದೇ ಬದಲಾವಣೆಯನ್ನು ಕಾಣಲು ಸಾಧ್ಯವಿಲ್ಲ, ಆ ಪಕ್ಷ ಮತ್ತು ಸಿದ್ಧಾಂತಗಳನ್ನು ಸರಿಯಾಗಿ ಅರ್ಥೈಸಿಕೊಂಡು, ಪಕ್ಷ ಮತ್ತು ಸಿದ್ಧಾಂತಗಳನ್ನು ಬೆಳೆಸಿ ಉಳಿಸುವ ಜೊತೆಗೆ ದೇಶವನ್ನು ಕಟ್ಟುವ, ದೇಶವನ್ನು ಪರಿವರ್ತಿಸುವ ಸಾಮರ್ಥ್ಯ ಇರುವು ಹೊಸ ತಲೆಮಾರಿನ ಯುವ ಪೀಳಿಗೆಯ ಪಾಲ್ಗೊಳ್ಳುವಿಕೆ ಮತ್ತು ನಾಯಕತ್ವದಿಂದ ಮಾತ್ರ. ಈ ಸತ್ಯವನ್ನು ನಾವು ಎಷ್ಟು ಬೇಗ ಅರಿಯುತ್ತೇವೆಯೋ ಅಷ್ಟು ಬೇಗ ದೇಶವು ಪ್ರಗತಿಯತ್ತ ಸಾಗುತ್ತದೆ, ಜೊತೆಗೆ ಜಗತ್ತಿನ ಮುಂದೆ ತಲೆ ಎತ್ತಿ ನಿಲ್ಲುತ್ತದೆ. ಇಲ್ಲದಿದ್ದರೆ ಈ ಕನಸುಗಳನ್ನು ಹೊತ್ತಿರುವ ಹೊಸ ತಲೆಮಾರು ಹಾಗೂ ದೇಶ ಎರಡು ಕೊರಗುತ್ತಾ ಕೂರಬೇಕಾಗುತ್ತದೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಭವ್ಯವಾಗಿ ಆರಂಭವಾದ ‘ಅಲ್ ನಜಿಮ್ ಅಸ್ ಸಾಕಿಬ್ ಪರ್ಫ್ಯೂಮ್ ಟ್ರೇಡರ್ಸ್’ – ಪರಿಮಳ ಪ್ರಿಯರ ಹೊಸ ಆಕರ್ಷಣೆಯ ಕೇಂದ್ರ
  • ಹರಿರಾಮ್.ಎ
    ವಕೀಲರು
😀
2
😍
2
😢
0
😡
0
👍
1
👎
1

Web Add
ವಂಶಪಾರಂಪರ್ಯ ರಾಜಕಾರಣ ಮತ್ತು ಪ್ರಜಾಪ್ರಭುತ್ವದ ವೈಫಲ್ಯ!
ವಂಶಪಾರಂಪರ್ಯ ರಾಜಕಾರಣ ಮತ್ತು ಪ್ರಜಾಪ್ರಭುತ್ವದ ವೈಫಲ್ಯ!
NEET: ದಕ್ಷಿಣ ಭಾರತದ ವಿದ್ಯಾರ್ಥಿಗಳಿಗೆ ಅನ್ಯಾಯ
NEET: ದಕ್ಷಿಣ ಭಾರತದ ವಿದ್ಯಾರ್ಥಿಗಳಿಗೆ ಅನ್ಯಾಯ
ಅಧಿಕಾರಿಗಳ ನಿರ್ಲಕ್ಷ್ಯ: ದಳವಾಯಿಹಳ್ಳಿಯ ನೀರಿನ ಸಮಸ್ಯೆಗೆ ಸ್ಪಂದಿಸಿ ಮಾನವೀಯತೆ ಮೆರದ ಪ್ರೊ. ಹರಿರಾಮ್
ಅಧಿಕಾರಿಗಳ ನಿರ್ಲಕ್ಷ್ಯ: ದಳವಾಯಿಹಳ್ಳಿಯ ನೀರಿನ ಸಮಸ್ಯೆಗೆ ಸ್ಪಂದಿಸಿ ಮಾನವೀಯತೆ ಮೆರದ ಪ್ರೊ. ಹರಿರಾಮ್
ದಕ್ಷಿಣ ಕನ್ನಡದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿದ್ದೆಯೇ ಬಿಎಸ್ಪಿ?
ದಕ್ಷಿಣ ಕನ್ನಡದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿದ್ದೆಯೇ ಬಿಎಸ್ಪಿ?
ಭಬನಿಪುರ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ಭಾರೀ ಹೊಡೆತ
ಭಬನಿಪುರ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ಭಾರೀ ಹೊಡೆತ
ಪ್ರಜಾಪರ ನ್ಯೂಸ್ ವರದಿಯ ಫಲಶೃತಿ ; ಸೇಸಮ್ಮರಿಗೆ ಪಾಸ್‌ವರ್ಡ್ ಹಸ್ತಾಂತರ, ಸಮಸ್ಯೆಗೆ ಅಂತ್ಯ
ಪ್ರಜಾಪರ ನ್ಯೂಸ್ ವರದಿಯ ಫಲಶೃತಿ ; ಸೇಸಮ್ಮರಿಗೆ ಪಾಸ್‌ವರ್ಡ್ ಹಸ್ತಾಂತರ, ಸಮಸ್ಯೆಗೆ ಅಂತ್ಯ
ನಾಳೆ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ.
ನಾಳೆ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ.
ಮಂಗಳೂರಿಗೆ ಹೊಸ ಪರಿಮಳ ಲೋಕ – ಭವ್ಯ ಉದ್ಘಾಟನೆಗೆ ಸಜ್ಜಾದ ‘ಅಲ್ ನಜಿಮ್ ಅಸ್ ಸಾಕಿಬ್ ಪರ್ಫ್ಯೂಮ್ ಟ್ರೇಡರ್ಸ್’
ಮಂಗಳೂರಿಗೆ ಹೊಸ ಪರಿಮಳ ಲೋಕ – ಭವ್ಯ ಉದ್ಘಾಟನೆಗೆ ಸಜ್ಜಾದ ‘ಅಲ್ ನಜಿಮ್ ಅಸ್ ಸಾಕಿಬ್ ಪರ್ಫ್ಯೂಮ್ ಟ್ರೇಡರ್ಸ್’
ಪೂಜ್ಯ ಧಮ್ಮತಿಸ್ಸ ಭಂತೇಜಿಯವರ ಸಾನ್ನಿಧ್ಯದಲ್ಲಿ ಮಂಗಳೂರಿನಲ್ಲಿ ಧಮ್ಮದೀಪ ಕಾರ್ಯಕ್ರಮ
ಪೂಜ್ಯ ಧಮ್ಮತಿಸ್ಸ ಭಂತೇಜಿಯವರ ಸಾನ್ನಿಧ್ಯದಲ್ಲಿ ಮಂಗಳೂರಿನಲ್ಲಿ ಧಮ್ಮದೀಪ ಕಾರ್ಯಕ್ರಮ
ತಮಿಳುನಾಡು ರಾಜಕೀಯದಲ್ಲಿ ಕಾಂಗ್ರೆಸ್ ನಡೆಗೆ ಟೀಕೆ: ಇಂಡಿಯಾ ಕೂಟದ ಏಕತೆಗೆ ಧಕ್ಕೆಯೇ?
ತಮಿಳುನಾಡು ರಾಜಕೀಯದಲ್ಲಿ ಕಾಂಗ್ರೆಸ್ ನಡೆಗೆ ಟೀಕೆ: ಇಂಡಿಯಾ ಕೂಟದ ಏಕತೆಗೆ ಧಕ್ಕೆಯೇ?
ಮೋದಿಯವರ ಭಾಷಣ ಮತ್ತು ಟೆಲಿಪ್ರಾಂಪ್ಟರ್ ವಿವಾದ: ವೈರಲ್ ವಿಡಿಯೋದಿಂದ ಹುಟ್ಟಿದ ಪ್ರಶ್ನೆಗಳು
ಮೋದಿಯವರ ಭಾಷಣ ಮತ್ತು ಟೆಲಿಪ್ರಾಂಪ್ಟರ್ ವಿವಾದ: ವೈರಲ್ ವಿಡಿಯೋದಿಂದ ಹುಟ್ಟಿದ ಪ್ರಶ್ನೆಗಳು
ಕಲೆಗಳಿಗೆ ವೇದಿಕೆ ಸಿಗಬೇಕೇ ಅಥವಾ ಕಟ್ಟುಪಾಡುಗಳಲ್ಲಿ ಸಿಲುಕಿಕೊಳ್ಳಬೇಕೇ?
ಕಲೆಗಳಿಗೆ ವೇದಿಕೆ ಸಿಗಬೇಕೇ ಅಥವಾ ಕಟ್ಟುಪಾಡುಗಳಲ್ಲಿ ಸಿಲುಕಿಕೊಳ್ಳಬೇಕೇ?
ದುಬಾರೆಯಲ್ಲಿ ಆನೆ ಕಾದಾಟದ ದುರಂತ: ಮಹಿಳೆ ಸಾವು – ವನ್ಯಜೀವಿಗಳಿಂದ ಸುರಕ್ಷಿತ ಅಂತರ ಕಾಪಾಡಲು ಸಚಿವ ಈಶ್ವರ ಖಂಡ್ರೆ ಸೂಚನೆ
ದುಬಾರೆಯಲ್ಲಿ ಆನೆ ಕಾದಾಟದ ದುರಂತ: ಮಹಿಳೆ ಸಾವು – ವನ್ಯಜೀವಿಗಳಿಂದ ಸುರಕ್ಷಿತ ಅಂತರ ಕಾಪಾಡಲು ಸಚಿವ ಈಶ್ವರ ಖಂಡ್ರೆ ಸೂಚನೆ
‘ಕಾಕ್ರೋಚ್ ಜನತಾ ಪಾರ್ಟಿ’ ಹಿಂದೆ ಇರುವ ಅಜೆಂಡಾ ಏನು? – ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹೊಸ ರಾಜಕೀಯ ವ್ಯಂಗ್ಯ ಚಳವಳಿ
‘ಕಾಕ್ರೋಚ್ ಜನತಾ ಪಾರ್ಟಿ’ ಹಿಂದೆ ಇರುವ ಅಜೆಂಡಾ ಏನು? – ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹೊಸ ರಾಜಕೀಯ ವ್ಯಂಗ್ಯ ಚಳವಳಿ
ಯುನೈಟೆಡ್ ಲೊರೆಟ್ಟೊ ಫ್ರೆಂಡ್ಸ್‌ಗೆ ಹೊಸ ಸಾರಥಿ: ಡೊನಾಲ್ಡ್ ನೊರೊನ್ಹಾ ಅಧ್ಯಕ್ಷ
ಯುನೈಟೆಡ್ ಲೊರೆಟ್ಟೊ ಫ್ರೆಂಡ್ಸ್‌ಗೆ ಹೊಸ ಸಾರಥಿ: ಡೊನಾಲ್ಡ್ ನೊರೊನ್ಹಾ ಅಧ್ಯಕ್ಷ
FACT CHECK ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಕ್ರಮಿ ಮತಾಂಧರು ಊರು ತೊರೆಯುತ್ತಿದ್ದಾರೆ ವಿಡಿಯೋದ ಅಸಲಿಯತ್ತು ಏನು?
FACT CHECK ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಕ್ರಮಿ ಮತಾಂಧರು ಊರು ತೊರೆಯುತ್ತಿದ್ದಾರೆ ವಿಡಿಯೋದ ಅಸಲಿಯತ್ತು ಏನು?
ದೇರಳಕಟ್ಟೆ ಆಸ್ಪತ್ರೆ ಜಂಕ್ಷನ್‌ನಲ್ಲಿ ಕೊಳಚೆ ನೀರಿನ ಸಮಸ್ಯೆ : ತಕ್ಷಣ ಕ್ರಮಕ್ಕೆ ಸಿಪಿಐ(ಎಂ) ಆಗ್ರಹ
ದೇರಳಕಟ್ಟೆ ಆಸ್ಪತ್ರೆ ಜಂಕ್ಷನ್‌ನಲ್ಲಿ ಕೊಳಚೆ ನೀರಿನ ಸಮಸ್ಯೆ : ತಕ್ಷಣ ಕ್ರಮಕ್ಕೆ ಸಿಪಿಐ(ಎಂ) ಆಗ್ರಹ
ಬೀದಿಬದಿ ವ್ಯಾಪಾರಿಗಳ ವಿರುದ್ಧ ನೈತಿಕ ಪೊಲೀಸ್‌ಗಿರಿ: ಕ್ರಮಕ್ಕೆ ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ ಒತ್ತಾಯ
ಬೀದಿಬದಿ ವ್ಯಾಪಾರಿಗಳ ವಿರುದ್ಧ ನೈತಿಕ ಪೊಲೀಸ್‌ಗಿರಿ: ಕ್ರಮಕ್ಕೆ ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ ಒತ್ತಾಯ
ಮಂಗಳೂರಿನಲ್ಲಿ ಭವ್ಯವಾಗಿ ಆರಂಭವಾದ ‘ಅಲ್ ನಜಿಮ್ ಅಸ್ ಸಾಕಿಬ್ ಪರ್ಫ್ಯೂಮ್ ಟ್ರೇಡರ್ಸ್’ – ಪರಿಮಳ ಪ್ರಿಯರ ಹೊಸ ಆಕರ್ಷಣೆಯ ಕೇಂದ್ರ
ಮಂಗಳೂರಿನಲ್ಲಿ ಭವ್ಯವಾಗಿ ಆರಂಭವಾದ ‘ಅಲ್ ನಜಿಮ್ ಅಸ್ ಸಾಕಿಬ್ ಪರ್ಫ್ಯೂಮ್ ಟ್ರೇಡರ್ಸ್’ – ಪರಿಮಳ ಪ್ರಿಯರ ಹೊಸ ಆಕರ್ಷಣೆಯ ಕೇಂದ್ರ
ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿಸಿ ಸಿಪಿಐಎಂ ಬೃಹತ್ ಪ್ರತಿಭಟನೆ
ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿಸಿ ಸಿಪಿಐಎಂ ಬೃಹತ್ ಪ್ರತಿಭಟನೆ
ಎಚ್ಚರ..! ಮೊಬೈಲ್‌ನಲ್ಲಿ ಈ APK ಆ್ಯಪ್ ಇನ್‌ಸ್ಟಾಲ್ ಮಾಡಿದ್ರೆ OTP ಕಳ್ಳತನ, ಬ್ಯಾಂಕ್ ಖಾತೆ ಖಾಲಿ
ಎಚ್ಚರ..! ಮೊಬೈಲ್‌ನಲ್ಲಿ ಈ APK ಆ್ಯಪ್ ಇನ್‌ಸ್ಟಾಲ್ ಮಾಡಿದ್ರೆ OTP ಕಳ್ಳತನ, ಬ್ಯಾಂಕ್ ಖಾತೆ ಖಾಲಿ
ತಾಣ- “ಮನಸ್ಸಿಗಿಂತ ನೆಮ್ಮದಿಯ ತಾಣ ಬೇರೊಂದಿಲ್ಲ.”
ತಾಣ- “ಮನಸ್ಸಿಗಿಂತ ನೆಮ್ಮದಿಯ ತಾಣ ಬೇರೊಂದಿಲ್ಲ.”
ಮಂಗಳೂರಿನಲ್ಲಿ ವೈಶಾಖ ಬುದ್ಧ ಪೂರ್ಣಿಮೆ ಅಂಗವಾಗಿ ಪವಿತ್ರ ಬುದ್ಧ ಜಯಂತಿ ಆಚರಣೆ
ಮಂಗಳೂರಿನಲ್ಲಿ ವೈಶಾಖ ಬುದ್ಧ ಪೂರ್ಣಿಮೆ ಅಂಗವಾಗಿ ಪವಿತ್ರ ಬುದ್ಧ ಜಯಂತಿ ಆಚರಣೆ
ಅನಂತಾಡಿ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ದಲಿತ ಮಹಿಳೆಗೆ ಜಾತಿ ನಿಂದನೆ ಆರೋಪಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಭೇಟಿ
ಅನಂತಾಡಿ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ದಲಿತ ಮಹಿಳೆಗೆ ಜಾತಿ ನಿಂದನೆ ಆರೋಪಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಭೇಟಿ
ಭಾಲ್ಕಿ | ನೀಟ್-ಯುಜಿ ಅಕ್ರಮ ಪ್ರಕರಣ ನಿಷ್ಪಕ್ಷಪಾತ ತನಿಖೆಗೆ ಎಬಿವಿಪಿ ಆಗ್ರಹ
ಭಾಲ್ಕಿ | ನೀಟ್-ಯುಜಿ ಅಕ್ರಮ ಪ್ರಕರಣ ನಿಷ್ಪಕ್ಷಪಾತ ತನಿಖೆಗೆ ಎಬಿವಿಪಿ ಆಗ್ರಹ
ಡಿಜಿಟಲ್ ಯುಗದಲ್ಲಿ ಯುವ ಒತ್ತಡ ಮತ್ತು ಮಾನಸಿಕ ಆರೋಗ್ಯ ಕುರಿತು ಸಮ್ಮೇಳನ – ಮಂಗಳೂರಿನಲ್ಲಿ ಯಶಸ್ವಿ ಆಯೋಜನೆ
ಡಿಜಿಟಲ್ ಯುಗದಲ್ಲಿ ಯುವ ಒತ್ತಡ ಮತ್ತು ಮಾನಸಿಕ ಆರೋಗ್ಯ ಕುರಿತು ಸಮ್ಮೇಳನ – ಮಂಗಳೂರಿನಲ್ಲಿ ಯಶಸ್ವಿ ಆಯೋಜನೆ
Prajapara News Kannada